ಕನ್ನಡ ಬರಹಗಳಿಗೂ ಬಂತೂ ಗೂಗಲ್ ಜಾಹಿರಾತು | Google Adsense for kannada

google adsense for kannada 2020

ನೀವೂ ಇಂಗ್ಲೀಷ್, ಹಿಂದಿ ಬ್ಲಾಗರ್ಸ್ ಅಂದರೆ ಯಾವುದೇ ರೀತಿಯ ಮಾಹಿತಿ ನೀಡುವ ಆರ್ಟಿಕಲ್ಸ್ ವೆಬ್ ಸೈಟ್ ಗಳಿಂದ ಲಕ್ಷಗಟ್ಟಲೆ ಹಣವನ್ನು ಮನೆಯಲ್ಲೇ ಕುಳಿತು ಗಳಿಸುತ್ತಾರೆ ಅಂತ ಓದಿರುತ್ತೀರ ಅಥವಾ ಯೂಟ್ಯೂಬ್ ವಿಡಿಯೋಗಳಲ್ಲಿ ನೋಡಿಯೂ ಇರಬಹುದು.

2003 ರಿಂದಲೇ ಇಂಗ್ಲೀಷ್ ಬರಹಗಳಿಗೆ `ಕಂಟೆಂಟ್ ಟಾರ್ಗೆಟಿಂಗ್ ಅಡ್ವರ್ಟೈಸ್ ಮೆಂಟ್ ಅಂತ ಗೂಗಲ್ ಜಾಹೀರಾತುಗಳನ್ನು ತೋರಿಸಿ ಬ್ಲಾಗರ್ಸ್ ಗಳಿಗೆ ಹಣಗಳಿಸಲು ಅವಕಾಶವನ್ನು ಮಾಡಿ ಕೊಟ್ಟಿತ್ತು.

Kannada Status For Smart Phone 2020

ಇದರಿಂದಲೇ ಗೂಗಲ್ ನಲ್ಲಿ ಕ್ಷಣಾರ್ಧದಲ್ಲಿ ಯಾವದೇ ರೀತಿಯ ಮಾಹಿತಿ ಸಿಗಲೂ ಪ್ರಾರಂಭವಾಯಿತು, ಬರು ಬರುತ್ತಾ ಆನ್‍ಲೈನ್ ಕಡೆ ಓದುಗರು ಬರಲು ಪ್ರಾರಂಭಿಸಿದರು, ಮೊದಲೆಲ್ಲಾ ಏನೇ ಮಾಹಿತಿ ಬೇಕಾದರೂ ಅದಕ್ಕೆ ಸಂಭಂಧಿಸಿದ ಪುಸ್ತಕ ಖರೀದಿಸಬೇಕಿತ್ತು ಆದರೆ ಇತ್ತೀಚೆಗೆ ನಿಮಗೆ ಕ್ಷಣಾರ್ಧದಲ್ಲಿ ಆನ್‍ಲೈನ್ ಸಿಕ್ಕಿ ಬಿಡುತ್ತೆ.

ಅದೇ ರೀತಿ ಚಿಕ್ಕ ಚಿಕ್ಕ ಕಂಪನಿಗಳಿಂದ ಹಿಡಿದು ದೊಡ್ಡ ದೊಡ್ಡ ಕಂಪನಿಗಳೂ ಸಹ ತಮ್ಮ ಜಾಹೀರಾತುಗಳನ್ನು ಆನ್‍ಲೈನ್ ನಲ್ಲಿ ತೋರಿಸಿ ಪ್ರಚಾರ ಮಾಡಿಕೊಂಡರು, ಆನ್‍ಲೈನ್ ಮಾರುಕಟ್ಟೆ ಪ್ರಾರಂಭವಾದಾಗಿನಿಂದ ಈ ಬ್ಲಾಗರ್ಸ್‍ಗಳಿಗೆ ಶುಕ್ರದೆಸೆ ಬಂದಂತಾಯಿತು ಯಾಕೆಂದರೆ ಯಾವುದೇ ವಸ್ತುವಿನ ಬಗ್ಗೆ ಮಾಹಿತಿಯನ್ನು ನೀಡಿ ಆ ವಸ್ತುವನ್ನು ಆನ್‍ಲೈನ್ ಖರೀದಿಸಲು ಅಲ್ಲೆ ಲಿಂಕ್ ಕೊಟ್ಟು ಅವಕಾಶ ನೀಡುವುದರಿಂದ ವಸ್ತುಗಳನ್ನು ಮಾರುವ ಕಂಪನಿಗಳಿಗೂ ಹಾಗೂ ಆ ವಸ್ತುಗಳ ಬಗ್ಗೆ ಮಾಹಿತಿ ನೀಡುವ ವೆಬ್‍ಸೈಟ್ ಗಳಿಗೂ ಒಳ್ಳೆಯ ಲಾಭ ಸಿಕ್ಕಂತೆ ಆಯಿತು.

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ನಮ್ಮ ಭಾರತದಲ್ಲಿ ಇಷ್ಟು ದಿನ ಇಂಗ್ಲೀಷ್, ಹಿಂದಿ, ಉರ್ದು, ಬೆಂಗಾಳಿ, ತೆಲುಗು, ತಮಿಳು ಇತ್ತೀಚೆಗೆ ಮಳಯಾಳಂ ಭಾಷೆಗೂ ಗೂಗಲ್ ಜಾಹೀರಾತಿನಿಂದ ಹಣಗಳಿಸುವ ಅವಕಾಶ ಸಿಕ್ಕಿತ್ತು. ಆದರೆ ನಮ್ಮ ಕನ್ನಡಿಗರಿಗೆ ಈ ಸುವರ್ಣಕಾಶ ಸಿಕ್ಕಿರಲಿಲ್ಲ. ಆದರೆ ಕಳೆದ 10-15 ದಿನಗಳಿಂದ ಕೆಲವು ಕನ್ನಡ ಬ್ಲಾಗರ್ಸ್‍ಗಳಿಗೆ ಈ ಸುವರ್ಣ ಅವಕಾಶವನ್ನು ನೀಡಿದೆ. ಅದರಲ್ಲಿ ನಿಮ್ಮ ಮೆಚ್ಚಿನ Kannadatv.in. ವೆಬ್ ಸೈಟ್‍ಗೂ ಈ ಅವಕಾಶ ಸಿಕ್ಕಿದೆ.

ಸದ್ಯದರಲ್ಲೇ ಅಫಿಶಿಯಲ್ ಆಗಿ ಕನ್ನಡಕ್ಕೂ ಜಾಹೀರಾತನ್ನು ಗೂಗಲ್ ನೀಡುತ್ತೆ ಅಂತ ತಿಳಿದು ಬಂದಿದೆ. ಮತ್ತೇಕೆ ತಡ ಈಗಲೇ ನೀವು ಯಾವುದರಲ್ಲಿ ಹೆಚ್ಚು ಮಾಹಿತಿ ಗೊತ್ತಿದಿಯೋ, ಯಾವ ವಿಭಾಗದಲ್ಲಿ ಅಂದರೆ ಇಂಟರೆಸ್ಟಿಂಗ್ ಕಥೆಗಳು, ಮಕ್ಕಳ ಕಥೆಗಳು, ಸೈನ್ಸ್, ಗ್ಯಾಜೆಟ್ಸ್, ಇತಿಹಾಸ, ಯಾವುದೇ ಟೆಕ್ನಿಕಲ್ ಸ್ಕಿಲ್ಸ್, ಮೊಬೈಲ್-ಕಂಪ್ಯೂಟರ್ ಮಾಹಿತಿ, ಆನ್‍ಲೈನ್ ಮಾಹಿತಿಗಳು ಒಟ್ಟಾರೆ ನಿಮಗೇನು ಆಸಕ್ತಿ ಇದೆಯೋ ಆ ವಿಭಾಗಕ್ಕೆ ಸಂಭಂದಿಸಿದಂತೆ ವೆಬ್‍ಸೈಟ್ ಡೆವಲಪ್ ಮಾಡಿಸಿ ಪ್ರತಿದಿನ ಬರೆದು ಪೋಸ್ಟ್ ಮಾಡಲು ಪ್ರಾರಂಬಿಸಿ.

ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

ಗೂಗಲ್ ನಲ್ಲಿ ಯಾವುದೇ ವಿಷಯ ಹುಡುಕಿದರೂ ಕನ್ನಡದಲ್ಲಿ ಸಿಗುವಂತೆ ಆದರೆ ನಿಮ್ಮ ವೆಬ್‍ಸೈಟ್ ಗೂ ಜನ ಹುಡುಕಿಕೊಂಡು ಬರಬಹುದು, ನೀವೂ ಇಂಗ್ಲೀಷ್, ಹಿಂದಿ ಬ್ಲಾಗರ್ಸ್‍ಗಳಂತೆ ಲಕ್ಷ ಲಕ್ಷ ಹಣವನ್ನು ಗಳಿಸಬಹುದು.

ನೆನಪಿರಲಿ ಯಾವುದೇ ಕಾರಣಕ್ಕೂ ಬೇರೆ ಕಡೆಯ ಮಾಹಿತಿಯನ್ನು ಕಾಪಿ, ಪೇಸ್ಟ್ ಮಾಡಬಾರದು, ಏನಿದ್ದರೂ ಒರಿಜಿನಲ್ ಪೋಸ್ಟ್ ಬರಹಗಳಿಗೆ ಮಾತ್ರ ಗೂಗಲ್ ಜಾಹೀರಾತು ನೀಡುತ್ತೆ.

Kannada Kavanagalu | Preetiya Kavana ಪ್ರೀತಿಯ ಕವನಗಳು

ಆನ್‍ಲೈನ್ ನಲ್ಲಿ ಕೇವಲ ಗೂಗಲ್ (Google adsense) ಜಾಹೀರಾತಿನಿಂದ ಮಾತ್ರ ಹಣಗಳಿಸುವುದಿಲ್ಲ ಇನ್ನು ಅನೇಕ ರೀತಿ ಅಂದರೆ ಅಫೀಲೇಟ್ ಮಾರ್ಕೆಟಿಂಗ್, ಬ್ರಾಂಡ್ ಪ್ರಮೋಷನ್, ಬೇರೆ ವೆಬ್‍ಸೈಟ್ ಅಥವಾ ಆರ್ಟಿಕಲ್ಸ್ ಲಿಂಕ್ ಪ್ರಮೋಷನ್, ಯಾವುದೇ ಕಂಪನಿಗಳ ವಸ್ತುಗಳ ಪೇಡ್ ಆರ್ಟಿಕಲ್ಸ್, ಪೇಡ್ ರಿವೀವ್ಸ್, ಕಂಪನಿ ಪ್ರಮೋಷನ್ಸ್ ಹೀಗೆ ಹತ್ತು ಹಲವು ರೀತಿ ಹಣಗಳಿಸಬಹುದು

ನಿಮಗೂ ವೆಬ್‍ಸೈಟ್ ಮಾಡುವುದು ಹೇಗೆ , ಆನ್‍ಲೈನ್ ನಲ್ಲಿ ಹಣಗಳಿಸುವುದು ಹೇಗೆ, ಗೂಗಲ್ ಜಾಹೀರಾತು ಪಡೆಯುವುದು ಹೇಗೆ ಎಂದು ತಿಳಿಯಲು ನಮ್ಮ ಟೆಲಿಗ್ರಾಂ ಚಾನ್‍ಗೆ Kannada Blogger on Telegram subscribe ಮಾಡಿ

ನಮ್ಮ ವಾಟ್ಸ್ ಆಪ್ ನಂಬರ್ 82963 01915 ಮೆಸೇಜ್ ಮಾಡಿ ತಿಳಿಯಬಹುದು.

ಕೇವಲ ಆರ್ಟಿಕಲ್ಸ್ ಬರೆದು ವೆಬ್‍ಸೈಟ್‍ನಲ್ಲಿ ಪೋಸ್ಟ್ ಮಾಡಿದರೆ ಗೂಗಲ್ ಸರ್ಚ್‍ನಲ್ಲಿ ಬರುವುದಿಲ್ಲ ಗೂಗಲ್‍ನಲ್ಲಿ ಮೊದಲ ಪೇಜ್‍ನಲ್ಲಿ ಕಾಣಿಸಿಕೊಳ್ಳಲು ಸರ್ಚ್ ಇಂಜಿನ್ ಆಪ್ಟಿಮೈಜೇಷನ್ ಮಾಡಬೇಕಾಗುತ್ತೆ, ಒಳ್ಳೆಯ ಸರ್ವರ್ ಇರುವ ಹೋಸ್ಟಿಂಗ್‍ನಲ್ಲಿ ನಿಮ್ಮ ವೆಬ್‍ಸೈಟ್ ಹೋಸ್ಟ್ ಮಾಡಬೇಕಾಗುತ್ತೆ, ಅದೇ ರೀತಿ 400 ರಿಂದ 600 ಪದಗಳಿಗೂ ಮೀರಿ ಆರ್ಟಿಕಲ್ಸ್ ಗಳಿದ್ದರೆ ಗೂಗಲ್‍ನಲ್ಲಿ ಒಳ್ಳೆಯ ರ್ಯಾಂಕ್ ಪಡೆದುಕೊಳ್ಳುತ್ತವೆ ಎಲ್ಲದಕ್ಕಿಂತ ಮುಖ್ಯವಾಗಿ ಓದುಗನಿಗೆ ನಿಮ್ಮ ಬರಹದ ಶೈಲಿ ಇಷ್ಟವಾಗಬೇಕಾಗುತ್ತೆ ಯಾವುದೇ ಓದುಗ ಮತ್ತೆ ಮತ್ತೆ ನಿಮ್ಮ ವೆಬ್‍ಸೈಟ್ ಗೆ ಬರುವ ರೀತಿ ಸುಂದರವಾಗಿ ಇರುವ ವೆಬ್‍ಸೈಟ್ ಇರಬೇಕು ಹಾಗೂ ಓದುಗನಿಗೆ ನಿಮ್ಮ ವೆಬ್ ಸೈಟ್ ಕೊಡುವ ಮಾಹಿತಿ ಮೇಲೆ ನಂಬಿಕೆ ಬರುವ ರೀತಿ ಇರಬೇಕು ಎಲ್ಲರಿಗೂ ಹೌದು ಈ ಜಾಲತಾಣದಲ್ಲಿ ಒಳ್ಳೆಯ ಬರಹಗಳು ಓದಲು ಸಿಗುತ್ತೆ ಅಂತ ಗೊತ್ತಾದರೆ ಅವರೇ ಅವರ ಸ್ನೇಹಿತರಿಗೂ ಶೇರ್ ಮಾಡಲು ಪ್ರಾರಂಬಿಸುತ್ತಾರೆ ಇದರಿಂದ ಎಂಗೇಜ್‍ಮೆಂಟ್ ಹೆಚ್ಚಾಗಿ ಗೂಗಲ್ ನಿಮ್ಮ ಬರಹಗಳನ್ನು ಮೊದಲ ಪೇಜ್‍ಲ್ಲಿ ಸಿಗುವ ಹಾಗೆ ಮಾಡುತ್ತೆ.

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಒಟ್ಟಾರೆ ನೀವು ಹೆಚ್ಚು ಹೆಚ್ಚು ತಿಳಿದುಕೊಂಡಿದ್ದರೆ ನಿಮ್ಮ ಓದುಗರಿಗೂ ಒಳ್ಳೆಯ ಮಾಹಿತಿ ನೀಡಲು ಸಾಧ್ಯ ಆದ್ದರಿಂದ ಏನೇ ಬರೆಯುವ ಮೊದಲು ನೀವು ತಿಳಿದುಕೊಳ್ಳಿ ಸರಿಯಾದ ಮಾಹಿತಿ ನೀಡಿ ಹಣವನ್ನು ಗಳಿಸಿ… ಎಲ್ಲರಿಗೂ ಶುಭವಾಗಲಿ

ಈ ಬರಹದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮಾಡಿ ತಿಳಿಸಿ ಎಲ್ಲರಿಗೂ ಶೇರ್ ಮಾಡಿ

  • ಹಂಪಿ ಹುಡುಗ

ಕನ್ನಡ ಲವ್ ಸ್ಟೋರಿಗಳನ್ನು ಓದಲು kannadatv.in ಗೆ ಭೇಟಿ ನೀಡಿ

ನೀವೂ ಪ್ರೇಮಕಥೆಗಳು, ಕವನ, ನುಡಿಮುತ್ತುಗಳು ಬರೆಯುತ್ತೀರ

ನಿಮ್ಮ ಬರಹಗಳನ್ನು ಈ ನಂಬರ್ ಗೆ 82963 01915 ವಾಟ್ಸ್ ಆಪ್ ಮಾಡಿ

Follow us on Telegram App

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

Kannada Kavanagalu | Preetiya Kavana – #05

ನುಡಿಮುತ್ತುಗಳು 2020

ಶೇರ್ ಮಾಡಿ Share this with your friends on WhatsApp

Similar Articles

5 thoughts on “ಕನ್ನಡ ಬರಹಗಳಿಗೂ ಬಂತೂ ಗೂಗಲ್ ಜಾಹಿರಾತು | Google Adsense for kannada

Leave a Reply

Top