ಆಗಿನ್ನೂ ಅವನು ಬೆಂಗಳೂರಿಗೆ ಹೊಸಬ, ರಾಜಾಜಿನಗರದಲ್ಲಿ ಸ್ನೇಹಿತರಿದ್ದ ರೂಮ್ ಗೆ ಬಂದು ಸೇರಿದ್ದ, ಓಡಾಟಕ್ಕೆ ಬಿಎಂಟಿಸಿ, ಯಾವ್ದೋ ಪುಟ್ಟ ಕಂಪನಿಯಲ್ಲಿ ಒಂದ್ ಹತ್ತು ಸಾವಿರ ರೂ ಸಂಬಳದ ಕೆಲಸ ಗಿಟ್ಟಿಸಿಕೊಂಡು ವೃತ್ತಿ ಲೈಫ್ ಆರಂಭಿಸಿದ್ದ . ಬಣ್ಣ ಬಣ್ಣದ ಕನಸುಗಳನ್ನು ಹೊಂದಿದ್ದ ಅವನಿಗೆ ಬಣ್ಣದ ಲೋಕ ಪರಿಚಯವಾಯಿತು..ಅದು ಅವಳಿಂದ ..ಅವಳ ಪರಿಚಯ ಅವನಿಗೆ ಆಗಿದ್ದು ಅದೊಂದು ಆ್ಯಕ್ಸಿಡೆಂಟ್ ನಿಂದ ..
ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಅವನು ಪವನ್ , ಅವಳು ಅದಿತಿ. ಬೆಂಗಳೂರಿಗೆ ಹೊಸಬನಾಗಿದ್ದ ಪವನ್ ಗೆ ದುನಿಯಾ ತೋರಿಸಿದವಳೇ ಅದಿತಿ. ಅವಳು ಬೆಂಗಳೂರಲ್ಲೇ ಹುಟ್ಟಿಬೆಳೆದ ಚಂದದ ಹುಡ್ಗಿ . ಮಾಡೆಲ್, ಡ್ಯಾನ್ಸರ್ ..!
ಅದೊಂದು ದಿನ ಪವನ್ ಎಂದಿನಂತೆ ಆಫೀಸ್ ಮುಗಿಸಿಕೊಂಡು ರೂಮ್ ಗೆ ಹಿಂದಿರುಗುತ್ತಿದ್ದ . ಬಸ್ ಇಳಿದು ರೋಡ್ ಕ್ರಾಸ್ ಮಾಡ್ತಿರುವಾಗ ಯರ್ರಾ ಬಿರ್ರಿ ಸ್ಪೀಡ್ ಆಗಿ ಬಂದ ಕಾರೊಂದು ಅವನಿಗೆ ಬಡಿಯಿತು . ಸಿಗ್ನಲ್ ಜಂಪ್ ಮಾಡಿ ಬಂದಿದ್ದ ಕಾರನ್ನು ಗಮಸಿದಳು ಅಲ್ಲೇ ಕಾರಲ್ಲಿದ್ದ ಅದಿತಿ. ಕ್ಷಣಾರ್ಧದಲ್ಲಿ ಪವನ್ ಬಳಿ ಜನ ಸೇರಿದ್ರು . ಜನ ಸುತ್ತುವರೆದರೇ ವಿನಃ ಆಸ್ಪತ್ರೆಗೆ ಕರೆದೊಯ್ಯುವ ಕೆಲಸಕ್ಕೆ ಮುಂದಾಗಿರ್ಲಿಲ್ಲ. ಅಲ್ಲಿಗೆ ಬಂದ ಅದಿತಿ ತಡಮಾಡದೆ ಅಲ್ಲೇ ಇದ್ದವರ ಸಹಾಯ ಪಡೆದು ಪವನ್ ನನ್ನು ತನ್ನ ಕಾರಿನಲ್ಲಿ ಹಾಕಿಕೊಂಡು ತನ್ನ ಮಾವನ ಮಗನೇ ಡಾಕ್ಟರ್ ಆಗಿರುವ ಆಸ್ಪತ್ರೆ ಕರೆದೊಯ್ದಳು . ಕೂಡಲೇ ಚಿಕಿತ್ಸೆ ಕೊಡಿಸಿದಳು . ಹೆಚ್ಚುಕಮ್ಮಿ ವಾರದ ಬಳಿಕ ಪವನ್ ಚೇತರಿಸಿಕೊಳ್ಳಲಾರಂಭಿಸಿದೆ . ತಿಂಗಳುಗಳ ಬಳಿಕ ತಕ್ಕಮಟ್ಟಿಗೆ ಗುಣಮುಖನಾದ . ಅದಿತಿ ಪವನ್ ನನ್ನು ಆಸ್ಪತ್ರೆಗೆ ಸೇರಿಸಿದ್ದು ಮಾತ್ರವಲ್ಲ ಕಣ್ಣಲ್ಲಿ ಕಣ್ಣಿಟ್ಟು ಸೇವೆಯನ್ನೂ ಮಾಡಿದ್ದಳು ..!
ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಮಾವನ ಮಗನ ವಿರೋಧದ ನಡುವೆಯೂ ಅವನ ಆರೈಕೆ ಮಾಡಿದಳು. ಪವನ್ ಡಿಸ್ಚಾರ್ಜ್ ಆಗಿ ರೂಮ್ ಗೆ ಹೋದ ಮೇಲೂ ಅವನ ಆರೋಗ್ಯ ವಿಚಾರಿಸುವುದನ್ನು ಮಾಡ್ತಿದ್ಲು . ಹೀಗೆ ಬರು ಬರುತ್ತಾ ಅದಿತಿಗೆ ಪವನ್ ಯಾಕೋ ಇಷ್ಟವಾಗಿದ್ದ. ಗೊತ್ತೋ ಗೊತ್ತಿಲ್ದೆ ಪವನ್ ಕೂಡ ಅದಿತಿಯನ್ನು ಪ್ರೀತಿಸಲಾರಂಭಿಸಿದ್ದ. ಅದಿತಿ ಶ್ರೀಮಂತೆ, ಅದಕ್ಕಿಂತ ಹೆಚ್ಚಾಗಿ ಜೀವ ಉಳಿಸಿದ ಪುಣ್ಯಾತ್ಗಿತ್ತಿ. ಅವಳು ಪ್ರಪೋಸ್ ಒಪ್ಪಿಕೊಳ್ದೆ ಇದ್ರೂ ಪರವಾಗಿಲ್ಲ . ನನ್ನ ಕೇವಲವಾಗಿ ನೋಡಿದ್ರೆ ಎಂಬ ಕಾರಣಕ್ಕೆ ಪವನ್ ತನ್ನ ಪ್ರೀತಿಯನ್ನು ಬಚ್ಚಿಟ್ಟುಕೊಂಡಿದ್ದ . ಅದಿತಿ ಅದಾಗಲೇ ಮಾವನ ಮಗನ ಜೊತೆ ಮದ್ವೆ ಫಿಕ್ಸ್ ಆಗಿದ್ರಿಂದ ಪವನ್ ಮೇಲಿನ ಪ್ರೀತಿಯನ್ನು ಕಷ್ಟಪಟ್ಟು ದೂರವಿಟ್ಟಿದ್ದಳು .
ಮದುವೆ ದಿನ ಹತ್ತಿರ ಬರ್ತಿದ್ದಂತೆ ಅದಿತಿಗೆ ಮನಸ್ಸು ಭಾರವಾಗ ತೊಡಗಿತು. ಪವನ್ ನನ್ನು ಬಿಟ್ಟಿರಲಾಗಲಿಲ್ಲ. ಪವನ್ ಕಷ್ಟವಾದರೂ ಅನಿವಾರ್ಯವಾಗಿ ಸಹಿಸಿಕೊಂಡ . ಆದರೆ ಅದಿತಿ ಲೈಫ್ ಲಿ ಮದ್ವೆ ಅನ್ನೋದು ಆಟವಲ್ಲ , ಮನಮೆಚ್ಚಿದವನ ಜೊತೆಯೇ ಬಾಳಬೇಕೆಂದು ಗಟ್ಟಿ ಮನಸ್ಸು ಮಾಡಿದಳು, ಮನೆಯಲ್ಲಿ ವಿಷಯ ತಿಳಿಸಿದಳು . ದೊಡ್ಡ ಬ್ಯುಸ್ ನೆಸ್ ಮನ್ ಆಗಿದ್ದರೂ ಒಬ್ಬಳೇ ಮಗಳ ಮನಸ್ಸಿಗೆ ನೋವಾಗಬಾರದೆಂದು, ಎಲ್ಲಾ ಸಂಪಾದನೆ ಮಗಳಿಗಾಗಿಯೇ ಅಲ್ವಾ ಅಂತ ಅದಿತಿ ಅಪ್ಪ ಕೊನೆಗೂ ಅದಿತಿ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ಟರು . ಅಮ್ಮ ಕೂಡ ತನ್ನ ಅಣ್ಣನ ಮಗನ ಜೊತೆಗಿನ ಮಗಳ ಮದ್ವೆ ಮುರಿದುಬಿಟ್ಟಲ್ಲ ಅಂತ ನೊಂದುಕೊಂಡರೂ ಮಗಳಿಗಿಂತ ಯಾರೂ , ಯಾವ್ದೂ ಹೆಚ್ಚಲ್ಲ ಅಂತ ಅವಳ ಪ್ರೀತಿಗೆ ಗ್ರೀನ್ ಸಿಗ್ನಲ್ ಕೊಟ್ರು . ಪವನ್ ಮನೆಯಲ್ಲೂ ಒಪ್ಪಿಗೆ ಸಿಕ್ತು . ಹೊಸ ದುನಿಯಾವನ್ನು ಪವನ್ ಗೆ ಪರಿಚಯಿಸಿದ ಪವನ್ ಗೆ ಅದಿತಿ ವಯಸ್ಸಿನಲ್ಲಿ 2 ವರ್ಷ ದೊಡ್ಡವಳು ಕೂಡ.. ಈಗ ಅವರಿಬ್ಬರು ಮದ್ವೆಯೂ ಆಗಿದ್ದಾರೆ . ಪವನ್ ತನ್ನದೇಯಾದ ಕಂಪನಿ ಆರಂಭಿಸಿ, ಒಂದಿಷ್ಟು ಮಂದಿಗೆ ಉದ್ಯೋಗ ನೀಡಲು ತಯಾರಿ ನಡೆಸಿದ್ದಾನೆ . ಋಣಾನುಬಂಧ ಅಂದ್ರೆ ಇದೇನಾ? ಲೈಫ್ ನಲ್ಲಿ ಆಗುವ ಕಲ್ಪನೆಗೂ ನಿಲುಕದ ಬದಲಾವಣೆಗಳು ಅಂದ್ರೆ ಇವೇನಾ?
Kannada Kavanagalu | Preetiya Kavana – #06
Kannada Kavanagalu | Preetiya Kavana – #02
Kannada Kavanagalu | Preetiya Kavana – #01
Kannada Nudimuttugalu – Ver.03
Nimagu Ee Blog Nalli Post Maadabekemba Aasey iddare
Love stories, Nimma Kavana, Nudimuttugalanna
email maadi – kannadanewslive01@gmail.com