ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada

top 10 kannada love quotes
kannada love quotes

ಇಲ್ಲದ ಭಾವನೆ ಹುಟ್ಟುಹಾಕಿದೆ
ಅದಕ್ಕೆ ಪ್ರೀತಿಯೆಂಬ ಹೆಸರಿಟ್ಟೆ
ಆ ಮೊಳಕೆ ಚಿಗುರೊಡೆಯಿತು
ಚಿಗುರನ್ನು ನೀನೇ ಚಿವುಟಿದೆ
ಸತ್ತಿದ್ದು ಬರೀ ಪ್ರೀತಿಯಲ್ಲ
ನನ್ನೆಲ್ಲಾ ಕನಸು, ಭಾವನೆಗಳು ..!

ಸ್ನೇಹತರೇ ಇವ್ರು ಹೇಳಿರೋದು ನಿಜ ಅಲ್ವಾ? ನಮ್ ಲೈಫ್ ಹಾಗೇ ಬಿಂದಾಸಾಗಿ ಅದರ ಪಾಡಿಗೆ ಅದು ನಡೆದುಕೊಂಡು ಹೋಗ್ತಿರುವಾಗ, ಇನ್ಯಾರೋ ಬರ್ತಾರೆ … ನಿನ್ ಜೊತೆ ಲೈಫ್ ಲಾಂಗ್ ಜೊತೆಗಿರ್ಬೇಕು ಅಂತ ಬಯಸ್ತಾರೆ . ಇಲ್ಲಸಲ್ಲದ, ಕಲ್ಪನೆಯೂ ಇಲ್ಲದ ಭಾವನೆಗಳನ್ನು ಹುಟ್ಟುಹಾಕ್ತಾರೆ. ಆ ಭಾವನೆಗೆ ಪ್ರೀತಿ ಅಂತ ನಾಮಕರಣ ಮಾಡಿ ಪ್ರೀತಿಸಲಾರಂಭಿಸ್ತಾರೆ . ಹಾಗೆ ಮೊಳಕೆಯೊಡೆದ ಪ್ರೀತಿ ಚಿಗುರೊಡೆಯುವಾಗ ಸಾಕಷ್ಟು ಕನಸುಗಳನ್ನು ಹುಟ್ಟುಹಾಕಿರುತ್ತೆ. ಆದರೆ, ಹೀಗಿರುವಾಗಲೇ ಪ್ರೀತಿಸಲು ಹೇಳಿಕೊಟ್ಟವರೇ ಇದ್ದಕ್ಕಿದ್ದಂತೆ ದೂರಾಗಿ ಬಿಡ್ತಾರೆ. ಅವರೇ ಪ್ರೀತಿ ಚಿಗುರನ್ನು ಚಿವುಟುತ್ತಾರೆ. ಆಗ ಸಾಯುವುದು ಬರೀ ಪ್ರೀತಿ ಮಾತ್ರ ಅಲ್ಲ ಅಲ್ವಾ? ನಮ್ಮ ಎಲ್ಲಾ ಭಾವನೆಗಳು,ಕನಸುಗಳು ಕೂಡ ಸತ್ತು ಹೋಗುತ್ತವೆ. ನಮಗೆ ಎಲ್ಲಾ ಸಂಬಂಧಗಳು ಸುಳ್ಳೆಂದು ಭಾಸವಾಗುತ್ತದೆ. ಯಾವ ಸಂಬಂಧಗಳಿಗೂ ಬೆಲೆ ಕೊಡೋದು ಬೇಡ ಅನಿಸುತ್ತೆ ಅಲ್ವೇ?
ಹೀಗಾಗಿ
” ಇಲ್ಲದ ಭಾವನೆ ಹುಟ್ಟುಹಾಕಿದೆ
ಅದಕ್ಕೆ ಪ್ರೀತಿಯೆಂಬ ಹೆಸರಿಟ್ಟೆ
ಆ ಮೊಳಕೆ ಚಿಗುರೊಡೆಯಿತು
ಚಿಗುರನ್ನು ನೀನೇ ಚಿವುಟಿದೆ
ಸತ್ತಿದ್ದು ಬರೀ ಪ್ರೀತಿಯಲ್ಲ
ನನ್ನೆಲ್ಲಾ ಕನಸು, ಭಾವನೆಗಳು” ಎಂಬ ಸಾಲುಗಳು ನಮಗೂ, ನಿಮಗೂ ಹತ್ತಿರವಾಗಿವೆ ಅನಿಸುತ್ತೆ! ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ…

new mobile love status

ಪ್ರೀತಿ ಹುಟ್ಟಿದಾಗ ಮೌನ ಮಾತು..
ಅದು ಅಗಲಿದಾಗ ಮಾತೂ ಮೌನ !

ಯೆಸ್ …ಪ್ರೀತಿ ಹುಟ್ಟುವಾಗ ಮೌನ ಮಾತಾಗುತ್ತೆ. ನೋಟ, ಕಿರುನಗೆ , ನಾಚಿಕೆ ಇಂಥಾ ಮೌನ ಭಾವಗಳು ಪ್ರೀತಿಯ ಸಂಕೇತವಾಗಿರುತ್ತವೆ. ಅವಳಿಗೆ/ಅವನಿಗೆ ಅವನ/ಅವಳ ಮೇಲೆ ಪ್ರೀತಿ ಹುಟ್ಟಿದೆ ಅನ್ನೋದನ್ನು ಬಾಯಿಬಿಟ್ಟು ನಿವೇದಿಸಿಕೊಳ್ಳದಿದ್ದರೂ ನಡೆಯಿಂದ ಸ್ಪಷ್ಟವಾಗಿರುತ್ತದೆ. ಆ ಮೌನ ಗೊತ್ತಿಲ್ಲದೇ ಮಾತಾಗಿರುತ್ತೆ.
ಆದರೆ, ಅದೇ ಪ್ರೀತಿ ಮರೆಯಾದಾಗ, ದೂರವಾದಗ ಬದುಕಿನಲ್ಲೊಂದು ಕಾರ್ಮೋಡ ಆವರಿಸಿಕೊಳ್ಳುತ್ತದೆ. ಆಗ ದುಃಖ ಕೂಡ ಕೇಳಿಕೊಳ್ಳಲಾಗದು. ಮಾತೇ ಹೊರದಷ್ಟು ಭಾರವಾಗುತ್ತದೆ ಮನಸ್ಸು, ಹೃದಯ..! ಆಗ ಮಾತೂ ಮೌನವಾಗಿ ನಾವೂ ಮೌನಕ್ಕೆ ಶರಣಾಗಿ , ಮನಸ್ಸಲ್ಲೇ ನೋವು ನುಂಗುತ್ತಾ, ಕೊರಗುತ್ತಾ, ಕಾಲಕಳೀತೀವಿ.

kannada whatsapp status new

ಅರಳುವ ಮುನ್ನ ಸುಂದರ ಹೊಂಗನಸು
ಅರಳಿದಾಗ ಕುಣಿದಾಡಿತು ಅವ್ಯಕ್ತ ಮನಸ್ಸು
ಅಗಲಿದಾಗ ಅರಿವಾಯಿತು ಕಂಡದ್ದು ಹಗಲುಗನಸು!

ಹ್ಞಾಂ…ಪ್ರೀತಿ ನಮ್ಮಲ್ಲಿನ್ನೂ ಹುಟ್ಟಿರಲ್ಲ. ಆಗ ಬೇರೆಯವರ ಪ್ರೀತಿ ಕಂಡೋ? ಸಿನಿಮಾ ಲವ್ ಸ್ಟೋರಿಯಿಂದಲೋ ಸ್ಫೂರ್ತಿ ಪಡೆದೂ ನಂಗೂ ಲವ್ವರ್ ಇದ್ದಿದ್ರೆ ಅಂತ ಅನಿಸುತ್ತೆ .. ಆ ಟೈಮ್ ನಲ್ಲಿ ಪ್ರೀತಿ ನಿಜಕ್ಕೂ ಹೊಂಗನಸು!
ಆಮೇಲೆ ನಮ್ಮಲ್ಲಿ ಯಾವಾಗ ಪ್ರೀತಿ ಅರಳುತ್ತೋ ಆಗ ನಮ್ಮ ಮನಸ್ಸು ಖುಷಿಯಿಂದ ಕುಣಿದಾಡಲಾರಂಭಿಸುತ್ತೆ.. ನಲಿದಾಡುತ್ತೆ!
ಆದರೆ ಯಾವಾಗ ಯಕ್ಕುಟ್ಟು ಹೋಗುತ್ತೋ ಆಗ ಗೊತ್ತಾಗುತ್ತೆ ಛೇ…ನಾನಿಷ್ಟು ಕಾಲ ಕಂಡಿದ್ದು ಬರೀ ಹಗಲು ಕನಸು ಅಂತ… ಬಹುಶಃ ಈ ಸಾಲುಗಳು ನಿಮ್ಮ ಲೈಫ್ ಗೂ, ಅನುಭವಕ್ಕೂ ತಕ್ಕದಾಗಿರಬಹುದು?

kannada sad love quotes

ನನ್ನ ಕಲ್ಪನೆಯ ಪ್ರೀತಿ ನೀನಾಗಿಲ್ಲವೆಂಬ ಬೇಸರವಿಲ್ಲ ..
ಯಾಕಂದರೆ ಎಲ್ಲಾ ಕಲ್ಪನೆಗಳು ನಿಜವಾಗಲೇ ಬೇಕೆಂದಿಲ್ಲ !

ನಿಜ ರೀ …ನಿರೀಕ್ಷೆಗಳು ಹುಸಿಯಾದಾಗ ನೋವಾಗುತ್ತೆ. ಅದೇರೇತಿ ನಮ್ಮ‌ ಕಲ್ಪನೆಗಳು ಸುಳ್ಳಾದಾಗ ಕೂಡ ಕಣ್ಣೀರು ಬರುತ್ತೆ. ನಾವು ಯಾವ್ದೇ ಒಂದು ಸಂಬಂಧದಲ್ಲಿ ಬರೀ ತಮ್ಮದೇಯಾದ ಕಲ್ಪನೆಗಳನ್ನು ಇಟ್ಟುಕೊಂಡಿರಬಾರದು . ಹೀಗಿರ್ತೀವಿ , ಹೀಗೆ ಟೈಮ್ ಪಾಸ್ ಮಾಡ್ತೀವಿ, ಹೀಗೆ ಬದುಕ್ತೀವಿ, ಹೀಗೇ ಜೊತೆ ಜೊತೆಯಲಿ ಲೈಫ್ ಲೀಡ್ ಮಾಡ್ತೀವಿ …ಅವಳು/ಅವನು ಸಹ ನನ್ನಷ್ಟೇ ಪ್ರೀತಿ ಕೊಡ್ತಾಳೆ/ನೆ ಎಂಬ ಅತಿ ಕಲ್ಪನೆಗಳು ಎಷ್ಟೋ ಸಲ ಸುಳ್ಳಾಗುತ್ತವೆ. ಆಗ ಖಂಡಿತಾ ತುಂಬಾ ಬೇಸರವಾಗುತ್ತೆ. ಆದರೆ ಆ ವಿಚಾರದಲ್ಲಿ ಬೇಸರ ಮಾಡಿಕೊಳ್ಳೋಕೆ ಹೋಗಬಾರದು. ಯಾಕಂದ್ರೆ ಕಲ್ಪನೆಗೂ ರಿಯಾಲಿಟಿಗೂ ವ್ಯತ್ಯಾಸವಿದ್ದು , ಕಲ್ಪನೆ ಬಹುತೇಕ ಸಂದರ್ಭಗಳಲ್ಲಿ ಸುಳ್ಳಾಗುತ್ತವೆ..ಅವು ಸುಳ್ಳಾಗಬಾರದೆಂಬ ಯಾವ ನಿಯಮಗಳೂ‌ ಇಲ್ಲ ಅಲ್ವಾ?

kannada tv quotes

ನಾ ಕಂಡ ಪ್ರೀತಿ ಸುಂದರ ಹೂದೋಟ
ಅನುಭವಿಸಿದ ಪ್ರೀತಿ ಬರೀ ಭಾವನೆಗಳ ಚೆಲ್ಲಾಟ ..!

ನಿಜ ಯಾರೂ ಕೂಡ ತಮ್ಮ ಪ್ರೀತಿ ಯಕ್ಕಟ್ಟು ಹೋಗುತ್ತೆ, ಬ್ರೇಕಪ್ ಆದ್ರೆ ಹೆಂಗೆ ಇರೀದು ಅನ್ನೋದ್ರ ಬಗ್ಗೆ ಕಿಂಚಿತ್ತೂ ಯೋಚ್ನೆ ಮಾಡಿರಲ್ಲ . ಅಂತೆಯೇ ನಾವು ಕಂಡು, ಕೇಳಿದ ಪ್ರೀತಿ, ಲವ್ ಸ್ಟೋರಿಗಳು ಸುಂದರ ಹೂದೋಟ, ಸ್ವರ್ಗದಂತಿರಬಹುದು… ಆದರೆ ನಮ್ಮ ಪ್ರೀತಿಯೂ ಅದೇ ರೀತಿ ಆಗ ಬೇಕೆಂದೇನು ಇಲ್ವಲ್ಲಾ? ಅನುಭವಕ್ಕೆ ಬಂದಾಗ ಮಾತ್ರ ಅರ್ಥವಾಗುತ್ತೆ, ಅದು ಬಹುಶಃ ಕೇವಲ ಭಾವನೆಗಳ ಜೊತೆ ಅವಳು/ನು ಆಡಿದ ಚೆಲ್ಲಾಟ ಅಂತ!!

kannada premigala kavana

ಹೃದಯ ಕೊಂಡು ಪ್ರೀತಿಸೌಧ ಕಟ್ಟಿ
ನೀ ಹೋಗುವ ಮುನ್ನ ಮಾರಬಹುದಿತ್ತು!
ಮಾರಾಟ ಮಾಡದೆ ಪಾಳು ಬಿಟ್ಟೆ
ಅದೀಗ ಭಾವನೆಗಳ ಸಮಾಧಿ ಆಗಿದೆ!
ಸ್ಮಶಾನದಲ್ಲಿನ ಅರಮನೆಗೆ ಬರುವವರಾರು?

ಹೃದಯ ಎಂಬ ಸೈಟನ್ನು ಮಾರುವ ಯೋಚನೆ ಇರ್ಲಿಲ್ಲ. ಆದರೆ ಪರ್ಮನೆಂಟ್ ಆಗಿ ನೆಲೆಸ್ತೀನಿ ಅಂತ ಪ್ರೀತಿ ಕೊಟ್ಟು ಅದನ್ನು ಕೊಂಡುಕೊಂಡಳು. ಅವ್ಳು ಹೋಗುವ ಮುನ್ನ ಬೇರೆ ಅವ್ರಿಗೆ (ಅವ್ಳಿಗೆ) ಕೊಟ್ಟು , ಅಂದ್ರೆ ಪ್ರೀತಿಸುವ ಇನ್ನೊಬ್ಬರನ್ನು ಹುಡುಕಿಕೊಟ್ಟು ಹೋಗಬಹುದಿತ್ತು. ಅದು ಸಾಧ್ಯವಿಲ್ಲ ಅನಿಸಿದಾಗ ಹೋಗುವ ಸೂಚನೆಯನ್ನಾದರೂ ಕೊಡಬಹುದಿತ್ತು. ಆಗ ನಾನು ಹೃದಯದಲ್ಲಿ ಈಗಾಗಲೇ ನಿರ್ಮಾಣವಾಗಿರುವಂತಹ ಪ್ರೇಮದರಮನೆಗೆ ಬೇರೊಬ್ಬರನ್ನು ರಾಣಿಯನ್ನಾಗಿಯಾದರೂ ಮಾಡಿಕೊಳ್ತಿದ್ದೆ. ಆದರೆ ಹೇಳದೆ ಕೇಳದೆ,‌ಮಾರದೆ ನೀ ಹೊರಟು ಹೋಗಿರೋದ್ರಿಂದ ಅದೀಗ ಎಲ್ಲಾ ಭಾವನೆಗಳ ಸಮಾಧಿಯಾಗಿದೆ! ಸ್ಮಶಾನದಲ್ಲಿನ ಅರಮನೆ ಪ್ರೀತಿ ಏನೂ.. ಬರೀ ಬಂಗಾರ, ವಜ್ರಗಳಿಂದಲೇ ನಿರ್ಮಾಣವಾಗಿದ್ದರೂ ಯಾರಾದ್ರೂ ಬಂದು ವಾಸವಿರ್ತಾರಾ? ಹಾಗೆಯೇ ಸ್ಮಶಾನ ಆಗಿರುವ ನನ್ನ ಹೃದಯದ ಅರಮನೆಗೆ ಯಾರೂ ಬರ್ತಿಲ್ಲ ,ಬಂದಿಲ್ಲ , ಯಾರ್ ಬರ್ತಾರೆ ಸ್ವಾಮಿ ಅನ್ನೋದು ಈ ಸಾಲುಗಳ ಭಾವ!

sad kannada status

ಪ್ರೀತಿಸಲಾಗದೆ ಸೋತರೆ ಜೀವನದಲ್ಲಿ ಗೆದ್ದು, ಪ್ರೀತಿ ಪಡಿತೀರಿ!
ಪ್ರೀತಿಸಿ ಸೋತು, ಸೋಲಿನಿಂದ ಹೊರಬರದಿದ್ದರೆ ಜೀವನದುದ್ದಕ್ಕೂ ಸೋಲೇ …!

ಹೌದು.. ನಮಗೆ ಲವ್ ಆಗ್ದೆ ಇದ್ರೆ ಒಳ್ಳೆಯದೇ .. ಲವ್ವರ್ ಇಲ್ಲ ಅಂತ ಕೊರಗುವ ಬದಲು ಲೈಫ್ ಬಗ್ಗೆ ಗಮನ‌ಕೊಟ್ರೆ , ಸಖತ್ತಾಗಿ ದುಡಿದ್ರೆ ಒಂದಲ್ಲ ಒಂದು ದಿನ ಯಾವ ಪ್ರೀತಿಯಾದ್ರೂ ನಮ್ಮನ್ನು ಹುಡ್ಕೊಂಡುಬರಬಹುದು . ಆದರೆ ಪ್ರೀತಿಸಿ… ಆ ಬಳಿಕ ಆ ಪ್ರೀತಿ ಸೋತರೆ, ಆ ಪ್ರೀತಿ ಸೋಲಿನಿಂದ ಹೊರಬರದೇ ಇದ್ದರೆ ಲೈಫ್ ಬರ್ಬಾತು ಅನ್ನೋದು ಈ ಸಾಲುಗಳ ಅರ್ಥ.

kannada love break up story

ನಂಬಿಕೆ ಇರದೆಡೆ ಪ್ರೀತಿ ಇರದು
ಪ್ರೀತಿ ಇರದೆಡೆ ನಂಬಿಕೆ ಇರದು

ಪ್ರೀತಿ ಮತ್ತು ನಂಬಿಕೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ . ಎಲ್ಲಿ ನಂಬಿಕೆ ಇರುವುದಿಲ್ಲವೋ, ಬರೀ ಸಂಶಯ, ಅನುಮಾನ ತುಂಬಿರುತ್ತೋ ಅಲ್ಲಿ ಪ್ರೀತಿಗೆ ನೆಲೆ ಇಲ್ಲ! ಅದೇರೀತಿ ಪ್ರೀತಿ ಇಲ್ಲದ ಕಡೆ ಅಂಥಾ ನಂಬಿಕೆಗೆ ಜಾಗವಿಲ್ಲ…ಯಾರನ್ನೇ ಆಗಲಿ, ಯಾವುದನ್ನೇ ಆಗಲಿ ನಂಬ್ತೀವಿ ಅಂದ್ರೆ ಅವರು/ಅದು ಇಷ್ಟವಾಗಿರಲೇಬೇಕು. ನಾವು ದ್ವೇಷಿಸುವವರ ಮೇಲೆ ನಂಬಿಕೆ ಇರಲ್ಲ ಅಲ್ವಾ? ದ್ವೇಷಿಸುವವರು ಒಳ್ಳೆಯದು ಮಾಡಿದರೂ ಅದು ಕೆಟ್ಟದಾಗಿಯೇ ಕಾಣುತ್ತದೆ.

kannada quotes | kannada nudimuttugalu

ದೇವರ ಸೃಷ್ಟಿ ನಮಗೇ ಸಾವಿರುವಾಗ
ನಮ್ಮ ಸೃಷ್ಟಿ ಪ್ರೀತಿಗೆ ಸಾವಿಲ್ಲವೇ?

ಈ ಭೂಮಿ ಮೇಲಿನ ನಾವು – ನೀವು ಸೇರಿದಂತೆ ಎಲ್ಲಾ ಜೀವಿಗಳು ಕೂಡ ಒಂದಲ್ಲ ಒಂದು ದಿನ ಸಾಯಲೇ ಬೇಕು . ಅದು ಸಹಜ ..ನಮ್ಮನ್ನು ಸೃಷ್ಟಿಸಿದ್ದು ದೇವರೆಂಬ ನಂಬಿಕೆ ಇದೆ . ದೇವರ ಸೃಷ್ಟಿಗಳಾದ ನಮಗೇ ನಾಳೆದಿನ ಸಾವಿದೆ. ಹೀಗಿರುವಾಗ ನಾವೇ ಕಂಡುಕೊಂಡ ಅಥವಾ ನಮ್ಮಲ್ಲಿ ನಮಗಾಗಿ ಹುಟ್ಟಿಕೊಂಡ ಪ್ರೀತಿ -ಪ್ರೇಮದಂತಾ ನಮ್ಮ ಸೃಷ್ಟಿಗಳು ಅಮರವಾಗಿರುತ್ತವೆಯೇ? ಹಾಗಾಗಿ ಹೇಗೆ ಯಾರೂ ಶಾಶ್ವತವಲ್ಲವೋ .. ಹಾಗೇ ಯಾವ ಭಾ‌ವನೆಗಳೂ ಶಾಶ್ವತವಲ್ಲ!

Kannada Kavanagalu | Preetiya Kavana – #06

Kannada Kavanagalu | Preetiya Kavana – #02

Kannada Kavanagalu | Preetiya Kavana – #01

Kannada Nudimuttugalu – Ver.03

Nimagu Ee Blog Nalli Post Maadabekemba Aasey iddare

Love stories, Nimma Kavana, Nudimuttugalanna

email maadi – [email protected]

ಶೇರ್ ಮಾಡಿ Share this with your friends on WhatsApp

Similar Articles

5 thoughts on “ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada

  1. Very good article! We are linking to this particularly great content on our site. Keep up the great writing.

Leave a Reply

Top
WhatsApp WhatsAppನಲ್ಲಿ ಕನ್ನಡ ಸ್ಟೇಟಸ್‍ ಪಡೆಯಲು ಇಲ್ಲಿ ಒತ್ತಿ