BMTC ಕಂಡಕ್ಟರ್ ‘ಕೊರೋನಾ ಜಾಗೃತಿ’ ಹಾಡಿಗೆ ಕಳೆದೋಗ್ತೀರಿ ..!

ಇಡೀ ವಿಶ್ವ ಕೊರೋನಾ ಎಂಬ ಮಹಾಮಾರಿಯಿಂದ ತತ್ತರಿಸಿದೆ. ಲಕ್ಷ ಲಕ್ಷ ಜನ ಸಾಯ್ತಿದ್ದಾರೆ. ಭಾರತದಲ್ಲಿ ಹೆಮ್ಮಾರಿ‌ ಅಟ್ಟಹಾಸ ಮಿತಿ ಮೀರಿದೆ. ಲಾಕ್ ಡೌನ್ ತೆರವಿನ ಬಳಿಕ ಕರ್ನಾಟಕದಲ್ಲಿ ಸೋಂಕು ದಿನೇ ದಿನೇ ತನ್ನ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ತಿದೆ . ಸರ್ಕಾರ, ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಜಾಗೃತಿ ಸಂದೇಶ ನೀಡುತ್ತಲೇ ಇದ್ದಾರೆ. ಮೊಬೈಲ್ ನಲ್ಲಿ ಯಾರಿಗೆ ಕಾಲ್ ಮಾಡಿದ್ರೂ ಮೊದಲಿಗೆ ಕೇಳುವುದು ಕೊರೋನಾ ಜಾಗೃತಿ ಮೆಸೇಜ್ .
ಇದೀಗ ನಮ್ಮ BMTC ಕಂಡಕ್ಟರ್ ಒಬ್ಬರು ಜಾಗೃತಿ ಹಾಡನ್ನು ರಚಿಸಿ ಹಾಡಿದ್ದಾರೆ. ಆ ಹಾಡು ಕೊರೋನಾ ಕುರಿತು ಅದ್ಭುತ ಜಾಗೃತಿ ಸಂದೇಶ ನೀಡುತ್ತಿದೆ.

ಹೌದು ಬಿಎಂಟಿಸಿ ಕಂಡಕ್ಟರ್ ಅಬ್ಬೂಬಕರ್ ಕೊರೋನಾ ಜಾಗೃತಿ ಮೂಡಿಸಲು ಸಂಗೀತ ಮಾರ್ಗವನ್ನು ಅನುಸರಿಸಿದ್ದಾರೆ . ಸ್ವತಃ ಅವರೇ ಸಾಹಿತ್ಯ ಬರೆದು ಹಾಡಿಗೆ ದನಿಯಾಗಿದ್ದಾರೆ . ಸುಷ್ಮಾ ಭಾರದ್ವಾಜ್, ಸ್ವರೂಪ್ ಕೆ ಎಸ್ ಮತ್ತು ಮಧು ಎ ಸಿದ್ದಿಕಿಯವರಿಗೆ ಸಾಹಿತ್ಯಕ್ಕೆ ಸಾಥ್ ನೀಡಿದ್ದಾರೆ . ಅಕ್ಷಯ್ ರಾಮುಹಳ್ಳಿಯವರು ಸಂಗೀತದ ಜೀವ ತುಂಬಿದ್ದಾರೆ . ಸತ್ಯ ಮೂಡಿಗೆರೆ ನಿರ್ಮಾಣದ ಹೊಣೆ ನಿಭಾಯಿದ್ದಾರೆ . ಸುಷ್ಮಾ ಭಾರದ್ವಾಜ್ ನಿರ್ದೇಶಿಸಿದ್ದು, ಸ್ವರೂಪ್ ಕೆ.ಎಸ್, ಮಧು ಎ ಮತ್ತು ಪ್ರಶಾಂತ್ ಕೆ ನಿರ್ದೇಶನಕ್ಕೆ ಕೈ ಜೋಡಿಸಿದ್ದಾರೆ ( ಸಹ ನಿರ್ದೇಶಕರು) . ಪೋಸ್ಟ್ ಪ್ರೊಡಕ್ಷನ್ ಇನ್ ಚಾರ್ಜ್ ಆಗಿ ಆರೂರ್ ರಾಕೇಶ್ ಹಾಗೂ ಸಂಕಲನಕಾರರಾಗಿ ಪ್ರಸಾದ್ ಕನ್ನಾರ್ ಅವರು ಜವಬ್ದಾರಿ ನಿಭಾಯಿಸಿದ್ದಾರೆ .
ಸಾಹಿತ್ಯ , ಸಂಗೀತ , ಎಡಿಟಿಂಗ್ ಎಲ್ಲವೂ ಇಷ್ಟವಾಗುತ್ತೆ . ಅಬ್ಬೂಬಕರ್ ಅವರ ದನಿಗೆ ಫುಲ್ ಮಾರ್ಕ್ಸ್ ಕೊಡದಿರೋಕೆ ಸಾಧ್ಯವೇ ಇಲ್ಲ .
ನೀವು ಒಂದ್ಸಲ ಹಾಡು ಕೇಳಿ … ಖಂಡಿತಾ ಶೇರ್ ಮಾಡ್ತೀರಿ ಅನ್ನೋದ್ರಲ್ಲಿ ನೋ ಡೌಟ್

Song Lyrics :

ನಮಸ್ಕಾರ ನನ್ನ ಹೆಸರು ಅಬೂಬಕ್ಕರ್ ಸಿದ್ದಿಕ್ .
ನಾನು ಬಿಎಂಟಿಸಿ ಕಂಡಕ್ಟರ್ ,ನಿಮ್ಮೆಲ್ಲರಿಗೋಸ್ಕರ ನನ್ನದೊಂದು ಚಿಕ್ಕ ಗೀತೆ.

ದೇಶಕ್ಕೆ ಬಂದೈತಿ ಮಹಾಮಾರಿಯಂತ ರೋಗ ಈ ಕರೋನ.
ದೇಶಕ್ಕೆ ಬಂದೈತಿ ಮಹಾಮಾರಿಯಂತ ರೋಗ ಈ ಕರೋನ.
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ.
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ.
ಸದಾ ಧರಿಸಬೇಕು ನಾವು ಮುಖಕ್ಕೆ ಮಾಸ್ಕ್ ನ್ನ.
ಸದಾ ಧರಿಸಬೇಕು ನಾವು ಮುಖಕ್ಕೆ ಮಾಸ್ಕ್ ನ್ನ.
ಸದಾ ತೊಳೆಯಬೇಕು ನಾವು ನಮ್ಮ ಕೈಗಳನ್ನ .
ತಿಕ್ಕಿ ತೊಳೆದು ಓಡಿಸಬೇಕಿದೆ ಈ ರೋಗವನ್ನ.
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ.
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ.

ಸದಾ ಕಾಯ್ದುಕೊಳ್ಳಿ ನೀವು ಸೋಶಿಯಲ್ ಡಿಸ್ಟೆನ್ಸ್ ನ್ನ.
ಸದಾ ಕಾಯ್ದುಕೊಳ್ಳಿ ನೀವು ಸೋಶಿಯಲ್ ಡಿಸ್ಟೆನ್ಸ್ ನ್ನ.
ಬಸ್ಸು ಹತ್ತುವಾಗ ಇರಲಿ ನಿಮಗೆ ಸಾವಧಾನ.
ಬಸ್ಸು ಹತ್ತುವಾಗ ಇರಲಿ ನಿಮಗೆ ಸಾವಧಾನ.
ಕೆಮ್ಮುವಾಗ ಸೀನುವಾಗ ಬಳಸಿ ಬಟ್ಟೆಯನ್ನ.
ಕೆಮ್ಮುವಾಗ ಸೀನುವಾಗ ಬಳಸಿ ಬಟ್ಟೆಯನ್ನ.
ರೋಗ ಲಕ್ಷಣ ಇದ್ದರೆ ನೋಡಿ ಕೂಡಲೇ ಡಾಕ್ಟರನ್ನ.
ರೋಗ ಲಕ್ಷಣ ಇದ್ದರೆ ನೋಡಿ ಕೂಡಲೇ ಡಾಕ್ಟರನ್ನ.
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ.

ಸಾರಿಗೆ ನೌಕರರು ಮಾಡುತ್ತಾರೆ ಸಮಾಜ ಸೇವೆಯನ್ನ.
ಸಾರಿಗೆ ನೌಕರರು ಮಾಡುತ್ತಾರೆ ಸಮಾಜ ಸೇವೆಯನ್ನ.
ಕಡೆಗಣಿಸದಿರಿ ಚಾಲಕ ನಿರ್ವಾಹಕರನ್ನ.
ಕಡೆಗಣಿಸದಿರಿ ಚಾಲಕ ನಿರ್ವಾಹಕರನ್ನ.
ಒದಿಗಿಸಿಕೊಳ್ಳಿರಿ ನಿಮಗೂ ಒಂದು ಮುಖಕ್ಕೆ ಮಾಸ್ಕ್ ನ್ನ.
ಒದಿಗಿಸಿಕೊಳ್ಳಿರಿ ನಿಮಗೂ ಒಂದು ಮುಖಕ್ಕೆ ಮಾಸ್ಕ್ ನ್ನ.

ಕಡಿಮೆ ಮಾಡಿಕೊಳ್ಳಿ ಕೈಗೆ ಕಾಸು ಕೊಡುವುದನ್ನ.
ಕಡಿಮೆ ಮಾಡಿಕೊಳ್ಳಿ ಕೈಗೆ ಕಾಸು ಕೊಡುವುದನ್ನ.
ಬಿಎಂಟಿಸಿ ಜಾರಿಗೆ ತಂದಿದೆ ಕ್ಯೂಆರ್ ಕೋಡನ್ನ.
ಬಿಎಂಟಿಸಿ ಜಾರಿಗೆ ತಂದಿದೆ ಕ್ಯೂಆರ್ ಕೋಡನ್ನ.
ಸಾಧ್ಯವಾದಷ್ಟು ನೀವು ಬಳಸಿ ಕ್ಯೂಆರ್ ಕೋಡನ್ನ
ನಿಮ್ಮ ಸುರಕ್ಷತೆಗೆ ಈ ಬದಲಾವಣೆ ತಂದಿವಿ ನೋಡಣ್ಣ
ನಿಮ್ಮ ಸುರಕ್ಷತೆಗೆ ಈ ಬದಲಾವಣೆ ತಂದಿವಿ ನೋಡಣ್ಣ

ಜೊತೆಯಾಗಿ ಓಡಿಸೋಣ ಈ ಮಹಾಮಾರಿಯನ್ನ
ಜೊತೆಯಾಗಿ ಓಡಿಸೋಣ ಈ ಮಹಾಮಾರಿಯನ್ನ
ಮನಸ್ಸಿದ್ದರೆ ಮಾರ್ಗ ಎನ್ನುವ ಹಾಗೆ ಗೆದ್ದು ತೋರಿಸೋಣ
ಮನಸ್ಸಿದ್ದರೆ ಮಾರ್ಗ ಎನ್ನುವ ಹಾಗೆ ಗೆದ್ದು ತೋರಿಸೋಣ
ನಾವು ಮಾಡುತ್ತಾ ಇತರರಿಗೂ ಸಹ ಮಾದರಿಯಾಗೋಣ
ನಾವು ಮಾಡುತ್ತಾ ಇತರರಿಗೂ ಸಹ ಮಾದರಿಯಾಗೋಣ

ದೇಶಕ್ಕೆ ಬಂದೈತೆ ಮಹಾಮಾರಿ ರೋಗ ಈ ಕರೋನಾ
ಎಲ್ಲರೂ ಕೂಡಿ ಮಾಡಬೇಕಿದೆ ಮುಂಜಾಗ್ರತೆಯನ್ನಾ
ಮುಂಜಾಗ್ರತೆಯನ್ನಾ ಮುಂಜಾಗ್ರತೆಯನ್ನಾ

Similar Articles

Top
error: Content is protected !!