ಗೆಳತಿ ನಿನ್ನ ಪ್ರೀತಿಗೆ ಪರ್ಯಾಯವಿಲ್ಲ ಯಾಕೆಂದರೆ ನನ್ನ ಹೃದಯ…..

ಲವ್ ಬ್ರೇಕಪ್ ಟೈಮಲಿ ಸಾಮಾನ್ಯವಾಗಿ ಹುಡುಗಿ ನಂಗಿಂತ ಒಳ್ಳೆಯ ಹುಡ್ಗಿ ಸಿಕ್ತಾಳೆ ಅಂತ ಹುಡುಗನಿಗೆ ಹೇಳ್ತಾಳೆ, ಕೆಲವೊಂದು ಸ್ಟೋರಿಲಿ ಹುಡುಗನೇ ಹುಡುಗಿಗೆ ಈ ಡೈಲಾಗ್ ಹೊಡೆದು ದೂರಾಗಬಹುದು.‌ಇವೆರಡೂ ಇಲ್ಲ ಅಂತಾದ್ರೆ ಮೋಸ, ಜಗಳದಿಂದ ದೂರವಾಗಬಹುದು. ಆಗ ಹೋದರೆ ಹೋಗೆ ನೀ ದೂರಾ ಅಂತ, ನೀನೊಬ್ಬಳೇನಾ , ನೀನೊಬ್ಬನೇನಾ ಅಂತ ಧಿಮಾಕಿನ, ಅಹಂನ ಮಾತುಗಳು ಕೇಳಿಬರುತ್ತವೆ. ಆದರೆ, ನಿಜವಾದ ಪ್ರೀತಿಯಲ್ಲಿ ಇಂಥಾ ಮಾತುಗಳು ಬರಲೇ ಬಾರದು. ಅಕಸ್ಮಾತ್ ಕುಟುಂಬದವರ ಒಪ್ಪಿಗೆ ಇಲ್ಲದೆಯೋ?ಇನ್ಯಾವುದೋ‌ಕಾರಣಕ್ಕೆ ದೂರವಿರಬೇಕೆಂದರೂ ಕೂಡ ಒಬ್ಬರಿಗೊಬ್ಬರು ಶುಭ ಹಾರೈಸಬೇಕು ಅದು ಪ್ರೀತಿ. ಅದ್ಬಿಟ್ಟು ಬೇರೆಯವರನ್ನು ಹುಡುಕಿಕೊಳ್ಳುವ ಮಾತು ಅಥವಾ ಸಿಗುತ್ತಾರೆಂಬ ಸೊಕ್ಕಿನ ನುಡಿ ಪ್ರೀತಿ ಅಲ್ಲ.. ಮಾರುಕಟ್ಟೆಯಲ್ಲಿ ಒಂದು ವಸ್ತುಗೆ ಬದಲಿ ಇನ್ನೊಂದು ವಸ್ತು ಸಿಗಬಹುದು .. ಹಾಗೆ‌ ಹೃದಯವಲ್ಲ… ಪ್ರೀತಿಗೆ ಪರ್ಯಾಯವಿದ್ದರೆ ನಿಮ್ಮ ಹೃದಯ ಮಾರುಕಟ್ಟೆ!

Kannada Status For Smart Phone 2020

ಇದು ಭಗ್ನ ಪ್ರೇಮಿಯೊಬ್ಬನ ಸ‌ಂಪೂರ್ಣ ಲವ್ ಸ್ಟೋರಿ. ನಾಲ್ಕೇ ನಾಲ್ಕು ಸಾಲುಗಳಲ್ಲಿ ಪ್ರೇಮದ ಆಳ, ಅಗಲ , ನಿಜರೂಪ ಹಾಗೂ ಅದು ದೂರಾದ ಮೇಲೆ ಕೊಡುವ ನೋವು ಎಲ್ಲವನ್ನೂ ಬರೆದಿದ್ದಾರೆ. ಆತ ಆ ಹುಡುಗಿಯನ್ನು ಎಷ್ಟು ಪ್ರೀತಿಸ್ತಿದ್ದ? ಸಮುದ್ರದ ಆಳ , ಅಗಲ, ಉದ್ದವನ್ನು ಬಲ್ಲವರು ಯಾರು? ಅದರ ಸಾವಿರ ಸಾವಿರ ಪಟ್ಟು ನಿನ್ನನ್ನು ನಾನು ಪ್ರೀತಿಸ್ತೀನಿ ಅಂತ ಅವನು ಅವಳಿಗೆ ಹೇಳಿದ್ದ… ಅವಳು ಪ್ರೀತಿಯ ಬಗ್ಗೆ ಕೇಳಿದಾಗ ಅವಳಿಗೆ‌ ಆ ಪ್ರೀತಿಯನ್ನು ಅರ್ಥೈಸಲು ಸಮುದ್ರ ಕೈ ಬೀಸಿ ಕರೆದಿತ್ತು. ಇವತ್ತು ಅವಳು ಅವನಿಂದ ದೂರಾಗಿದ್ದಾಳೆ .. ಅವನನ್ನು ಸಮುದ್ರ ಮತ್ತೆ ಕೈ ಬೀಸಿ ಕರೆದಿದೆ.. ಆಳ ಅಳೆಯಬೇಕೆ ( ಅಂದ್ರೆ‌ ಮುಳುಗಿ ಸಾಯಲೇ) ಅಥವಾ ಅವಳು ಬರುತ್ತಾಳೆ ಎಂದು ಕಾಯಲೇ ಎಂಬುದು ಅವನ ನೋವಿನ ನುಡಿಗಳು..‌.. ಆದರೆ ಸಾವೇ ಅಂತಿಮವಲ್ಲ…‌ಪ್ರೀತಿ ಸಮುದ್ರಷ್ಟು ಆಳ , ಅಗಲ, ಉದ್ದ ಅರ್ಥಾತ್ ಬರಿಗಣ್ಣಲಿ ಅಳೆಯಲಾಗದಷ್ಟು ಇದ್ದಿದ್ದೇ ಆದರೆ ಅದು ನಿಜವಾದ ಪ್ರೀತಿ ಬಂದೇ ಬರುತ್ತೆ.. ಇಲ್ಲ ಅದು ನಿಜವಾದ ಪ್ರೀತಿಯಲ್ಲ.. ಹೋದರೆ ಹೋಗಲಿ…

ನಿಜ ಅಲ್ವಾ? ಎಲ್ಲಾ ಸ್ನೇಹವೂ ಪ್ರೀತಿಗೆ ತಿರುಗಲ್ಲ. ಆದರೆ, ನೀವು ಯಾವುದೇ ಪ್ರೀತಿಯ ಆರಂಭ ತೆಗೆದುಕೊಳ್ಳಿ ಅದು ಸ್ನೇಹದಿಂದಲೇ ಶುರುವಾಗಿರುತ್ತೆ. ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ‌ ತಿಳಿಸಿ

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ಹೌದು ನಿಜವಾದ ಪ್ರೀತಿಗೆ ಎಂದೂ‌ಕೂಡ ಕೊನೆ ಎಂಬುದೇ ಇಲ್ಲ. ಅದು ಖುಷಿಯ ಕೊನೆಯನ್ನೂ ಕೂಡ ಕಾಣಲು ಸಾಧ್ಯವಿಲ್ಲ. ಮದುವೆಯೇ ಪ್ರೀತಿಯ ಕ್ಲೈಮ್ಯಾಕ್ಸ್ ಅಂತ ಕೆಲವರು ಅಂದುಕೊಂಡಿದ್ದಾರೆ. ಲವ್ ಮ್ಯಾರೇಜ್ ಆಯ್ತು,‌ಕೊನೆಗೂ ಎಲ್ಲರನ್ನೂ ಒಪ್ಪಿಸಿ ಮದ್ವೆ ಆದ್ವಿ.. ಸುಖಾಂತ್ಯ ಕಂಡಿದೆ ಅಂತ ಹೇಳ್ತಾರೆ. ಅದು ತಪ್ಪು ..ಪ್ರೀತಿ ಮದುವೆ ನಂತರವೂ ಇರುತ್ತೆ .. ಅಕಸ್ಮಾತ್ ಮದುವೆ ಆಗದೆ ಬ್ರೇಕಪ್ ಆದರೂ‌ ಪ್ರೀತಿ ಇರುತ್ತೆ‌…ಏನಂತೀರಾ?

Kannada Kavanagalu | Preetiya Kavana ಪ್ರೀತಿಯ ಕವನಗಳು

ಹೌದಲ್ವಾ? ಆರಂಭದಲ್ಲಿ ಯಾರಿಗೂ ತಿಳಿಯದಂತೆ ಕದ್ದು ಮುಚ್ಚಿ ಪ್ರೀತಿ ಮಾಡ್ತಿರ್ತೀರಿ. ಆಮೇಲೆ ಹಂಗೂ ಹಿಂಗೂ ಸೈಕಲ್ ಹೊಡೆದು ಮನೆಯವರನ್ನು ಒಪ್ಪಿಸಿ ಮದುವೆ ಆಗ್ತಿರೋ ಅಥವಾ ಮದುವೆಯಾಗಿ ಮನೆಯವರನ್ನು ಒಪ್ಪಿಸ್ತೀರೋ ಗೊತ್ತಿಲ್ಲ. ಆದ್ರೆ, ಮದುವೆ ಆದಮೇಲೆ ನಿಮ್ಮ ಕುಟುಂಬ, ಸಮಾಜ ಎಲ್ಲೆಡೆ ನಿಮ್ಮ ಪ್ರೀತಿ ಅಧಿಕೃತ ಹಾಗೂ ಅಧಿಕಾರಯುತ..!‌ಅರೆಂಜ್ ಮ್ಯಾರೇಜ್ ಕೂಡ ಹಾಗೇ ಅಲ್ವೇ ..?

ನೀವು ಬೇರೆಯವರಿಗೆ ಒಳ್ಳೆಯದನ್ನು ಮಾಡಿದರೆ. ಆ ಪುಣ್ಯ ಖಂಡಿತಾ ಎಲ್ಲೂ ಹೋಗಲ್ಲ. ಒಂದು ದಿನ ನಿಮಗೆ ಕಷ್ಟದಲ್ಲೋ ಅಥವಾ ಯಾವ್ದೋ ಅಗತ್ಯ ಸಂದರ್ಭದಲ್ಲೋ ಯಾವುದೋ ರೀತಿಯಲ್ಲಿ, ಯಾರಿಂದಲಾದರೂ ಗೊತ್ತೋ ಗೊತ್ತಿಲ್ಲದೆ ಒಳ್ಳೆಯದಾಗುತ್ತದೆ

ಹೌದು ಸಹಾಯ ಮಾಡುವಾಗ ಪ್ರತಿಫಲದ ಅಥವಾ ಯಾವುದೇ ರೀತಿಯ ನಿರೀಕ್ಷೆಗಳು ಇರಬಾರದು. ನೀವು ನಿರೀಕ್ಷೆ ಇಟ್ಟುಕೊಂಡು ಸಹಾಯದ ಮುಖವಾಡ ಧರಿಸಿ ಏನಾದರೂ ಮಾಡಿದರೆ ಅದು‌ ಸಹಾಯವೇ ಅಲ್ಲ.

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ನಿಮ್ಮನ್ನು ನೀವೇ ಪ್ರೀತಿಸದಿದ್ದರೆ ಬೇರೆ ಅವರೇಕೆ ಪ್ರೀತಿಸಬೇಕು? ಯಾಕೆ ಪ್ರೀತಿಸ್ತಾರೆ? ನಿಮ್ಮನ್ನು ನೀವು ಪ್ರೀತಿಸುವುದೇ ಜಯದ‌ ಮೊದಲ ಮೆಟ್ಟಿಲು.. ಆಮೇಲೆ ನಿಧಾನಕ್ಕೆ ಎಲ್ಲರೂ , ಎಲ್ಲವೂ ನಿಮ್ಮನ್ನು ಪ್ರೀತಿಸುತ್ತಾರೆ .. ಜಗತ್ತೇ ನಿಮ್ಮತ್ತ ತಿರುಗತ್ತದೆ. ಉದಾಹರಣೆಗೆ ಯಾವ್ದೇ ಸಾಧಕರನ್ನು, ಜನಪ್ರಿಯ ವ್ಯಕ್ತಿಗಳನ್ನು ನೋಡಿ, ಅವರು ತಮ್ಮನ್ನು ತಾವು ಪ್ರೀತಿಸಿದ್ದರಿಂದಲೇ ಕೀಳಿರೆಮೆ ಇಲ್ಲದೆ ಅವರವರ ವೇದಿಕೆಯಲ್ಲಿ ಸ್ಟಾರ್ ಗಳಾಗಲು ಸಾಧ್ಯವಾಗಿದ್ದು.. ಅದು ರಾಜಕಾರಣಿಗಳೇ ಆಗಿರಬಹುದು.. ನಟ – ನಟಿಯರೇ ಆಗಿರಬಹದು .. ಕ್ರೀಡಾ ಕ್ಷೇತ್ರವೇ ಆಗಿರಬಹುದು..

ಅದು ಮಾಡಬೇಕು, ಇದು ಮಾಡಬೇಕು ಅಂತ ಸುಮ್ಮನೇ ಇದ್ದಾರೆ ಹೇಗೇ? ಕೆಲಸ ಶುರುವೇ ಮಾಡಿಲ್ಲ ಅಂತಾದ್ರೆ ಮುಗಿಯುವುದು ಹೇಗೆ? ಊಟ ಆಗಿಲ್ಲ ಊಟ ಆಗಿಲ್ಲ , ಹಸಿವಾಗ್ತಿದೆ ಅನ್ನೋ ಬದಲು ಅನ್ನಾನೋ, ಗಂಜೀನಾ ಬೇಯಿಸಿಕೊಂಡು ತಿನ್ಬೇಕಲ್ವಾ? ಹಾಗೆಯೇ ಗುರಿ ಇಟ್ಟುಕೊಂಡ್ರೆ ಸಾಕಾಗಲ್ಲ ಆ ಗುರಿ ತಲುಪಬೇಕೆಂದರೆ ಕೆಲಸ ಆರಂಭವಾಗಬೇಕು..

Rela Love Story : ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

ಜೀವನ ತುಂಬಾ ಚಿಕ್ಕದು. ಈ ಚಿಕ್ಕ ಸಮಯವನ್ನು ನಾವು ಇರೋ ಅಷ್ಟು ದಿನ ಸಂತೋಷ, ನೆಮ್ಮದಿ, ಪ್ರೀತಿ ಕೊಡುವ ಒಳ್ಳೆಯ ಜನರಿಗೆ ಮೀಸಲಿಡೋಣ .. ಕೆಟ್ಟದ್ದಕ್ಕೆ, ಕೆಟ್ಟವರಿಗಾಗಿ ಮೀಸಲಿಡುವುದಾಗಲಿ, ಕೆಟ್ಟ ಆಲೋಚನೆಗಳಿಗೆ ನೀಡುವುದಾಗಲಿ ಮಾಡುವುದು ಬೇಡ ಎನ್ನುವುದೇ ಈ ಸಾಲುಗಳ ಅರ್ಥ..

  • ಆಗುಂಬೆ ಹುಡುಗ

ಕನ್ನಡ ಲವ್ ಸ್ಟೋರಿಗಳನ್ನು ಓದಲು kannadatv.in ಗೆ ಭೇಟಿ ನೀಡಿ

ನೀವೂ ಪ್ರೇಮಕಥೆಗಳು, ಕವನ, ನುಡಿಮುತ್ತುಗಳು ಬರೆಯುತ್ತೀರ

ನಿಮ್ಮ ಬರಹಗಳನ್ನು ಈ ನಂಬರ್ ಗೆ 82963 01915 ವಾಟ್ಸ್ ಆಪ್ ಮಾಡಿ

Follow us on Telegram App

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

Kannada Kavanagalu | Preetiya Kavana – #05

ನುಡಿಮುತ್ತುಗಳು 2020

ಬೇರೆಯವರನ್ನು ಖುಷಿಯಾಗಿ ಇಟ್ಟಿರುವುದೇ ನೀವು ಯಾವತ್ತು ಖುಷಿಯಿಂದ ಇರುವುದಕ್ಕೆ ಉತ್ತಮ ಮಾರ್ಗ.

ನೀವು ಈಗಾಗಲೇ ಪಳಗಿದ ವಿಷಯದಲ್ಲಿ ಇನ್ನಷ್ಟು ಕೆಲಸ ಮಾಡಲು ಪ್ರಯತ್ನಿಸದೇ ಇದ್ದರೆ ನೀವು ಖಂಡಿತ ಬೆಳೆಯುವುದಿಲ್ಲ

ನಾವು ಇದ್ದಹಾಗಯೇ ಇರುತ್ತೇವೆ ಎಂದು ಭಾವಿಸಿದ್ದೆ ಆದರೆ ನಾವು ಏನಾಗಬೇಕೆಂದು ಬಯಸಿರುತ್ತೇವೆಯೋ ಅದನ್ನು ಸಾಧಿಸಲು ಸಾಧ್ಯವಿಲ್ಲ

ನಿಮ್ಮಿಂದ ಮಾಡಲಾಗದು ಎಂದು ಜನ ಹೇಳುವುದನ್ನು ಮಾಡಿ ತೋರಿಸಿದಾಗ ಜೀವನ ಅತ್ಯಂತ ಸಂತುಷ್ಟಗೊಳ್ಳುತ್ತದೆ

ಯಶಸ್ಸಿಗೆ ನೀವು ಬೆಲೆಯನ್ನು ತೆರುವುದಿಲ್ಲ,ಆದರೆ ನೀವು ಯಶಸ್ಸಿನ ಬೆಲೆಯನ್ನು ಆನಂದಿಸುತ್ತೀರಿ

ಆತ್ಯುನ್ನತ ಗುರಿಯನ್ನೇ ಹಾಕಿಕೊಳ್ಳಿ ಅಲ್ಲಿಗೆ ತಲುವುವ ತನಕ ನಿಲ್ಲಲೇ ಬೇಡಿ

ನಾವು ಜೀವನದಲ್ಲಿ ಕಲಿತುಕೊಳ್ಳುವ ಕೆಲವು ಉತ್ತಮ ಪಾಠಗಳೆಂದರೆ ನಾವು ಮಾಡಿದ ಹಳೆಯ ತಪ್ಪುಗಳಿಂದ ಪಡೆದ ಪಾಠಗಳೇ ಆಗಿರುತ್ತದೆ.ಹೀಗಾಗಿ ಹಳೆಯ ತಪ್ಪುಗಳು ಜ್ಞಾನದ ಸಂಕೇತಗಳು ಮತ್ತು ಭವಿಷ್ಯದ ಯಶಸ್ಸುಗಳು

Similar Articles

Top
error: Content is protected !!