ನಿಮ್ಮ ಪ್ರೀತಿಗೆ ಯಾರು ಅರ್ಹರಲ್ಲವೋ ಅವರಿಗಾಗಿ ತುಡಿಯುವುದು…..

kannada nudimuttugalu
kannada life quotes new 2020

ಅಕ್ಷರಶಃ ಈ ಮಾತು ನೂರಕ್ಕೆ ನೂರರಷ್ಟು ಸತ್ಯ . ಜೀವನದಲ್ಲಿ ನಾವು – ನಾವಾಗಿದ್ದೇವೆ , ಸ್ವಲ್ಪ ಆದ್ರು ತಗ್ಗಿ- ಬಗ್ಗಿ, ದೇವರು, ದೊಡ್ಡವರು, ಗುರು- ಹಿರಿಯರು ಅಂತ ಗೌರವದಿಂದ ಇದ್ದೀವಿ ಅಂತಾದ್ರೆ ನಾವು ಅಂದುಕೊಂಡಂತೆ ನಮ್ಮ ಜೀವನ ನಡೆಯದಿರುವುದೇ ಕಾರಣ. ನಾವು ಇವತ್ತು ಹೀಗೆ ಆಗಬೇಕು, ಅದು ಬೇಕು – ಇದು ಬೇಕು ಅಂತ ಬಯಸ್ತಿರುವಾಗ ಎಲ್ಲವೂ ಸಿಕ್ಕಿದ್ದರೆ ? ನೀವೇ ಯೋಚಿಸಿ ನಾವು ನಾವಾಗಿರ್ತಿದ್ವಾ?

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

kannada life quotes new 2020

ಹೌದು, ಎಷ್ಟೋ ಜನ ವಯಸ್ಸಾದ ಅಪ್ಪ- ಅಮ್ಮನ ಬಿಟ್ಟು, ಸಂಬಂಧಗಳ ಸಂಪರ್ಕ ತೊರೆದು ಆಧುನಿಕ ಪ್ರಪಂಚದ ಯಂತ್ರಗಳಂತೆ ಬದುಕುತ್ತಿದ್ದರು. ಇದೀಗ ಊರು ಕೈ ಬೀಸಿ ಕರೀತಾ ಇದೆ . ಸಂಬಂಧಗಳ ಮೌಲ್ಯ ಅರ್ಥವಾಗ್ತಿದೆ.

kannada life quotes new 2020

ನಿಜ, ನಮ್ಮ ಜೀವನದ ಸಾರಥಿಗಳು ನಾವೇ … ಇಲ್ಲಿ ಯಾರ ಮುಲಾಜಿಗೂ ನಾವು ಒಳಗಾಗುವುದು ಬೇಡ. ಬೇರೆ ಅವರಿಗೆ ತಕ್ಕಂತೆ ನಾವು ಬದುಕುವುದಲ್ಲ .. ನಮ್ಮ ಜೀವನ ನಡೆಸುವವರು ನಾವು. ಆದರೆ, ನಮ್ಮಲ್ಲಿನ ನ್ಯೂನತೆಗಳು ನಮ್ಮ ಜೀವನವನ್ನೇ ಹಾಳುಮಾಡುತ್ತವೆ. ಅಂಥಾ ವಿಚಾರಗಳಲ್ಲಿ ಬದಲಾವಣೆ ಬೇಕೆಂದರೆ ಅಗತ್ಯವಾಗಿ ಆಗಲೇ ಬೇಕು. ನಮಗಾಗಿ ನಾವು ಬದಲಾಗಿ, ಜೀವನ ಚಂದಗಾಣಿಸಿಕೊಳ್ಳಬೇಕು.

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

kannada life quotes new 2020

ಯೆಸ್, ನಾವಿಲ್ಲದ ಜಾಗಕ್ಕೆ ಇನ್ನೂಬ್ಬರು ಬಂದಾಗ ಆ ಜಾಗದಲ್ಲಿ ಅವರನ್ನು ನೋಡಲು ಬೇರೆಯವರಿಗೆ ಕಷ್ಟ ಆಗಬೇಕು. ನಮ್ಮ ಅನುಪಸ್ಥಿತಿ ಬೇರೆಯವರಿಗೆ ಕಾಡಬೇಕು‌.‌ನಮಗಾಗಿ ತುಡಿಯಬೇಕು. ಅದು ವೈಯಕ್ತಿಕ ಜೀವನದಲ್ಲೇ ಆಗಿರಬಹುದು ಅಥವಾ ವೃತ್ತಿಪರ ಲೈಫಲ್ಲೇ ಆಗಿರಬಹದು. ಉದಾಹಣೆಗೆ ನೀವು ಕೆಲಸ ಮಾಡುವ ಜಾಗದಲ್ಲಿ ನೀವು ತೊರೆದ ಮೇಲೆ ಅಲ್ಲೊಂದು ಶೂನ್ಯ ನೆಲೆಸಬೇಕು. ಆ ಮಟ್ಟಿಗೆ ನೀವು ದುಡಿಯಬೇಕು ಅರ್ಥಾತ್ ನಿಷ್ಠರಾಗಿ ,‌ಕ್ರಿಯಾಶೀಲರಾಗಿ ಕೆಲಸ ಮಾಡಬೇಕು.

ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

kannada life quotes new 2020

ಕೆಲವರು ಯಾವಾಗಲೂ ಕಲ್ಪನೆಯನ್ನೇ ಮುಳುಗಿರುತ್ತಾರೆ .ಅವರು ಕಲ್ಪನಾ ಲೋಕದಿಂದ ವಾಸ್ತವಕ್ಕೆ ಬಂದು ವ್ಯವಹರಿಸುವುದೇ ಇಲ್ಲ. ಹೀಗಿರುವಾಗ ಅವರ ಜೀವನದಲ್ಲಿ ಯಾವುದೇ ಬದಲಾವಣೆ ಸಾಧ್ಯವಾಗುವುದಿಲ್ಲ. ವಾಸ್ತವವನ್ನು ಅರಿತು, ಅದಕ್ಕೆ ತಕ್ಕಂತೆ ಜೀವನ ರೂಪಿಸಿಕೊಳ್ಳಬೇಕು. ಹಾಗೆಯೇ ವಾಸ್ತವದಲ್ಲಿ ನಿಂತು ಭವಿಷ್ಯದ ಕಲ್ಪನೆಗಳನ್ನು ಕಾಣುತ್ತೇವೆ. ಅದು ಸಹಜ ಹಾಗೂ ಅಗತ್ಯ ಕೂಡ. ಆದರೆ ಸುಂದರ ಕಲ್ಪನೆಗಳು ವಾಸ್ತವವಾಗಲು ಆ ನಿಟ್ಟಿನ ಶ್ರಮ, ಕಾರ್ಯ ಮುಖ್ಯ.

kannada life quotes new 2020

ಬೇರೆಯವರನ್ನು ಮಾದರಿಯಾಗಿಟ್ಟುಕೊಂಡು ಜೀವನ ನಡೆಸುವುದು ಒಳ್ಳೆಯದೇ. ಆದರೆ ಅಷ್ಟೇ ಸಾಕೇ? ಅದರ ಜೊತೆಗೆ ನಾವು ನಮ್ಮದೇಯಾದ ಅಸ್ಥಿತ್ವಹೊಂದಿ ಇನ್ನೊಬ್ಬರಿಗೆ ಮಾದರಿಯಾಗಿ ಬದುಕಬೇಕು. ಯಾರಿಗಿಲ್ಲದಿದ್ದರೂ ಕೊನೇಪಕ್ಷ ನಮ್ಮ‌ ಮಕ್ಕಳಿಗೆ ಮಾದರಿಯಾಗಿರೋಣ ಎನ್ನುವುದೇ ಸಾಲುಗಳ ಅರ್ಥ.

ಕನ್ನಡ ವಾಟ್ಸ್ ಆಪ್ ಸ್ಟೇಟಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ

kannada life quotes new 2020

ವ್ಯಕ್ತಿತ್ವ ವ್ಯಕ್ತಿಗೆ ಶೋಭೆ. ನಾವು ವ್ಯಕ್ತಿತ್ವಕ್ಕೆ ಬೆಲೆ ಕೊಡಬೇಕೇ ವಿನಃ ವ್ಯಕ್ತಿಗಳಿಗಲ್ಲ. ವ್ಯಕ್ತಿಯನ್ನು ಆರಾಧಿಸುವುದಲ್ಲ, ಬದಲಾಗಿ ವ್ಯಕ್ತಿತ್ವಗಳನ್ನು ಆರಾಧಿಸೋಣ. ವ್ಯಕ್ತಿಯನ್ನು ಆರಾಧಿಸಿದರೆ ಆತನ ತಪ್ಪುಗಳು ಕೂಡ ಸಹ್ಯ ಎನಿಸಿಬಿಡುತ್ತವೆ. ನಾವು ಗಮನಿಸಿ ವ್ಯಕ್ತಿತ್ವಗಳನ್ನು ಅಭಿಮಾನಿಸಿದರೆ, ಗೌರವಿಸಬೇಕು. ವ್ಯಕ್ತಿತ್ವ ಹಳ್ಳಹಿಡಿದರೆ ಖಂಡಿತಾ ಅದು ಅಸಹ್ಯ ಎನಿಸಿ, ಬಿಡಬಹುದು. ಆದರೆ, ವ್ಯಕ್ತಿ ವಿಚಾರದಲ್ಲಿ ನಾವು ಕಣ್ಣಿದ್ದೂ ಕುರುಡರಾಗಿರುತ್ತೇವೆ.

kannada life quotes new 2020

ನಿಜ , ಯಾರು ಅರ್ಹರೋ ಅವರಿಗೆ ಪ್ರೀತಿ ನೀಡಿ. ಯಾವ್ದೇ ಸಂಬಂಧಗಳಲ್ಲಿ ಆಗಿರಬಹುದು, ನಿಮ್ಮ ಪ್ರೀತಿಗೆ ಯೋಗ್ಯರಲ್ಲದ ಮಂದಿಗೆ ಪ್ರೀತಿ ನೀಡುವುದು ನಿಮ್ಮ ಮೂರ್ಖತನ. ಅದಕ್ಕೆ ನೀವೇ ಪಶ್ಚಾತ್ತಾಪ ಪಡುತ್ತೀರಿ.

Kannada Nudimuttugalu – Ver.03

kannada life quotes new 2020

ಹೌದು ಪ್ರಪಂಚದಲ್ಲಿರುವ ಪ್ರತಿಯೊಬ್ಬರಿಗೂ ಕಷ್ಟಗಳಿರುತ್ತವೆ. ಆ ಕಷ್ಟಗಳನ್ನು ನಮ್ಮ ಕಣ್ಣಿಗೆ ಕಾಣುವುದೇ ಇಲ್ಲ. ಬರೀ ಬೇರೆಯವರ ಸುಖಗಳನ್ನು ಅಥವಾ ಸುಖೀ ಮನುಜರನ್ನು ನೋಡಿ, ನಾವು ನಮಗೇ ಕಷ್ಟ ಕಷ್ಟ ಅಂತ ಚಿಂತೆ ಮಾಡಿ ಮಾಡಿ ಸಾಯ್ತೀವಿ‌.‌ ಒಂದ್ಸಲ ಬೇರೆ ಅವರ ಕಷ್ಟಗಳನ್ನು ನೋಡಿ, ಕಷ್ಟದಲ್ಲಿರುವವರನ್ನು ನೋಡಿ ಆಗ ಅರ್ಥ ಆಗುತ್ತೆ ನಮ್ಮ ಕಷ್ಟಗಳು ಏನೂ ಅಲ್ಲ ಅಂತ

kannada life quotes new 2020

ಎಷ್ಟು ದಿನ ಬದುಕಿರ್ತೀವಿ. ಏನು? ಎಂಥಾ ಯಾವ್ದು ಗೊತ್ತಿಲ್ಲ. ಬದುಕು ತುಂಬಾ ಚಿಕ್ಕದು, ಅಷ್ಟೇ ಸರಳ ಕೂಡ. ಸುಮ್ನೆ ಹಣ, ಆಸ್ತಿ- ಅಂತಸ್ತು, ಪ್ರತಿಷ್ಠೆ ಅಂತ ಹಿಂದೆ ಬಿದ್ದು ತುಂಬಾ ಕಠಿಣ ಮಾಡಿಕೊಳ್ಳುತ್ತೀವಿ‌. ಅದರಿಂದ ಕೊನೆಯಲ್ಲಿ ನಾವು ತೆಗೆದುಕೊಂಡು ಹೋಗುವುದಾದರೂ‌ ಏನು?

  • ಆಗುಂಬೆ ಹುಡುಗ

ಕನ್ನಡ ಲವ್ ಸ್ಟೋರಿಗಳನ್ನು ಓದಲು kannadatv.in ಗೆ ಭೇಟಿ ನೀಡಿ

ನೀವೂ ಪ್ರೇಮಕಥೆಗಳು, ಕವನ, ನುಡಿಮುತ್ತುಗಳು ಬರೆಯುತ್ತೀರ

ನಿಮ್ಮ ಬರಹಗಳನ್ನು ಈ ನಂಬರ್ ಗೆ 82963 01915 ವಾಟ್ಸ್ ಆಪ್ ಮಾಡಿ

Follow us on Telegram App

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

Kannada Kavanagalu | Preetiya Kavana – #05

Similar Articles

Top