ಯಾರೆಣಿಸಿದಂತಿಲ್ಲ ಲೈಫು!

life story kannada

ತಂಗಾಳಿ ಬೀಸುವುದೆಂಬ ನಿರೀಕ್ಷೆಯಲ್ಲಿ ಕೂತಂತಿದ್ದವನ ಕಡೆ ಗೂಳಿಯಂತೆ ಬಿರುಗಾಳಿ ಬಂದಪ್ಪಳಿಸಿದಂತೆ. ಪ್ರಶಾಂತವಾಗಿ ಹರಿಯುತ್ತಿದ್ದ ನೀರು ಒಮ್ಮಿಂದೊಮ್ಮೆಲೆ ಉಕ್ಕಿ ರೌದ್ರಾವತಾರ ತೋರಿದಂತೆ. ಮುಳುಗೇಳೋ ಭಾಸ್ಕರನನ್ನ ಶಶಿಯೇ ಆಪೋಷಣೆ ತೆಗೆದುಕೊಂಡಂತೆ. ಮೇಘದತ್ತ ಇಷ್ಟೆಲ್ಲಾ ಉದಾಹರಣೆಯ ಉಡುಗೊರೆಯ ಹೊತ್ತು ತಂದಿಹನೆಂದರೆ ಅದಕ್ಕೊಂದು ಅರ್ಥ ಇದೆ. ಮನುಷ್ಯ ಜನ್ಮ ಅನ್ನೋದು ಮನೆಯ ಜಗಲಿಯ ಮೇಲಿನ ದೀಪದಂತೆ. ಎಣ್ಣೆಯೇ ಖಾಲಿಯಾಗಿ ದೀಪ ಆರಿಹೋಗಬಹುದು, ಇಲ್ಲವೇ ಗಾಳಿಯ ತಂಟೆಯಲ್ಲೇ ದೀಪ-ಬತ್ತಿಯ ಸಂಬಂಧ ಧೂಳಿಪಟವಾಗಬಹುದು. ಹುಟ್ಟಿದಾಗ ಅತ್ತು ಜಗದ ನಗುವಿಗೆ ಕಾರಣರಾದವರು ದೊಡ್ಡವರಾದ ಮೇಲೆ ಪರರ ನಗುವನ್ನ ಅಳುವಾಗಿ ಪರಿವರ್ತಿಸುವ ಕಡೆ ಹೆಚ್ಚಿನ ಗಮನವನ್ನ ಕೊಡ್ತೀವಿ. ಬಡವನ ಬಾಲ್ಯ ಮರುಭೂಮಿಯಂತಿದ್ದು ಆತ ಹುಡುಕುವುದು ಒಂದೇ ಊಟ-ಹರಿದೋದ ಬಟ್ಟೆಗಾಗಷ್ಟೇ. ಇದನ್ನೇ ಕಣ್ಣಾರೇ‌ ಅನುಭವಿಸಿ ಹೊಸಬದುಕಿನೆಡೆಗೆ ನಡೆಯುವ ಪಾದಗಳು ತುಂಬಾ ವಿರಳ. ಆದರೆ, ಸಾಗಿದ ದಾರಿಯಲ್ಲಿ ಕಾಣುವುದೆಲ್ಲಾ ನಾವೆಣಿಸಿದ ಹಾಗೆ ಅಂತ ತಿಳಿದು ಸಾಗುವುದೇ ಈ ಹುಲುಮಾನವನ ಜೀವನ. ಕೆಲವರಂತೂ ಆ ದೇವರು ಈ ಭೂಮಿ ಮೇಲೆ ನಮ್ಮನ್ನ ಹುಟ್ಟಿಸಿದ್ದು ಕೇವಲ ಕಷ್ಟ-ನಷ್ಟಗಳನ್ನ ಅನುಭವಿಸೋಕೆ ಅನ್ನೋ‌ ನಿರ್ಧಾರಕ್ಕೆ ಆದಷ್ಟು ಬೇಗ ಬಂದು ಬಿಡುತ್ತಾರೆ. ಕಷ್ಟಗಳ ಮೂಟೆಯ ಬಿಚ್ಚದೇ ಇಷ್ಟಗಳ ಖಾಲಿ‌ ಮೂಟೆಯಲ್ಲೇ ಉಂಡು ಸುಖಿಸುವ ಸುಖಪುರುಷರೇ ತುಂಬಿತುಳುಕುತ್ತಿದ್ದಾರೆ.

ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇನ್ನು ಶ್ರೀಮಂತಿಕೆಯ ನೆರಳಲ್ಲೇ ಅವರಿವರ ಬೆರಳಿಡಿದು ನಡೆದವರ ಪಾತಾಳದ‌ ದರ್ಶನ ಅದ್ಯಾವ ಮನುಷ್ಯನಿಗೂ ಬೇಡ. ಕಷ್ಟದಾ ಊರುಗೋಲೇ ಹೇಗಿದೆ ಎಂಬುದನ್ನೇ ಮರೆತು ಅವರಿವರು ಕೂಡಿಟ್ಟ ಕಾಂಚಾಣದಲೇ ಖುಷಿಪಡಲು ಹೊರಟವನಿಗೆ ಒಮ್ಮೆಲೆ ನೋವಿನ ಸರಮಾಲೆಗಳು ಕೊರಳಿಗೆ ಬಿದ್ದು ಉಸಿರುಗಟ್ಟಿಸುವ ಕೆಲಸವನ್ನ ನಿರಂತವಾಗಿಸಿಬಿಡುತ್ತೆ. ಆರೋಗ್ಯವಿದ್ದಕಡೆ ಭಿಕ್ಷಾಟನೆ ಜಾಸ್ತಿಯಾಗಿ, ಅನಾರೋಗ್ಯದ ಕಡೆ ಭವಿಷ್ಯವೇ ಮುದುಡಿ ಮೂಲೆ ಸೇರಿರುತ್ತದೆ. ವರುಷ ಮೂವತ್ತು ಕಳೆಯೋದ್ರೊಳಗಡೆ ಸಣ್ಣದೊಂದು ಸೈಟ್ ಮಾಡ್ಬೇಕು ಅದಾದ ಮೇಲೆ‌ ಗೃಹಸ್ಥಾಶ್ರಮ ವನ್ನ‌ ತುಳಿದು‌ ನೆಟ್ಟಗಿದ್ದರಾಯ್ತು ಅನ್ನೋ ಲೆಕ್ಕಾಚಾರದಲ್ಲೇ ಕೆಲವರಿದ್ರೆ, ಇನ್ನೂ ಕೆಲವರು ಯಾರ್ ಸ್ವಾಮಿ‌ ಅಷ್ಟೆಲ್ಲಾ ಬೆವರರಿಸಿ ಕೆಲಸ ಮಾಡಿ ಹಣಕೂಡಿಡಬೇಕು..? ಅದನ್ನ ಬಿಟ್ಟು ಮೂರೊತ್ತಿನ ಕೂಳಿಗೆ ಕಾಳಗ ಶುರುಹಚ್ಚಿಕೊಳ್ಳೋಣ ಅನ್ನೋರ ಬಣವೇ ಜಾಸ್ತಿಯಾಗಿ ಕಾಣಿಸುತ್ತದೆ. ಆದರೆ, ಮನುಷ್ಯ ಲೆಕ್ಕಾಚಾರಗಳಿಗೆ ಎಂದಿಗೂ ಶಿರವೇ ಇರೋದಿಲ್ಲ, ಅಂದರೆ ತಲೆ ಇದ್ದರಷ್ಟೇ ಸರಿಯಾದ ಪಥದಲ್ಲಿ ಸಂಚಿರಿಸೋಕೆ ಸಾಧ್ಯ ಅದನ್ನ ಬಿಟ್ಟು ಬದುಕಿನ-ಭವಿಷ್ಯದ ಹಾದಿಯನ್ನೇ ತಿಳಿಯದ ಹುಲುಮಾನವ ಹಾಕಿದ ವೇಳಾಪಟ್ಟಿಗಳು ವೇದನೆಯಿಂದಲೇ ಕೂಡಿ ವೇದನೆಯಿಂದಲೇ ಅಂತ್ಯವನ್ನ ಕಾಣುತ್ತದೆ. 

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ದೇವರು-ದಿಂಡಿರು ಅನ್ನೋ ಪದವನ್ನ ತೆಗಳುವ ಪದವಂತಲೇ ಭಾವಿಸುವವರು ಸಾಕಷ್ಟು‌ ಮಂದಿ ಇದ್ದಾರೆ. ಯಾಕಪ್ಪಾ ತಂದೆ ನನ್ನ ತಂದೆ-ತಾಯಿಯನ್ನ ಇಷ್ಟು ಕ್ರೂರವಾದ ಖಾಯಿಲೆಯಿಂದ ಕೊಂದು‌ಮುಗಿಸಿದೇ ನಿನಗೆ ಕರುಣೆಯೇ ಇಲ್ವಾ..? ನಾನು ನಡೆದ ಹಾದಿಯಲ್ಲಿ ಮಣ್ಣೇ ಎಲ್ಲಾ ಹೊನ್ನು ಕಾಣುವುದೆಂತು..? ಹೀಗೆ ನಾನಾ ಬಗೆಯ ಯಾರೊಬ್ಬರಿಗೂ ಬಡಿಸಲಾರದ ಶಿವದತ್ತನ ಎಡೆಯಲ್ಲೇ ನೋವೂಟವನ್ನ ಬಡಿಸುವ ಕಾರ್ಯವನ್ನ ಬುದ್ದಿಗೇಡಿಗಳು ಮಾಡ್ತಾರೆ. ಉಸಿರೇ ಭರವಸೆಯಿಲ್ಲದ ಅತಿಥಿ ಅಂದಮೇಲೆ‌ ಆ ಉಸಿರಿಗೆ ಶಿವದತ್ತನ ಹೆಸರನ್ನ ಕಟ್ಟಿ ದ್ವೇಷಿಸುವ ಕಾಯಕ ನಮಗ್ಯಾಕೆ. ಹಗಲನ್ನ ಮಾತ್ರ ಲೆಕ್ಕಕ್ಕೆ ತೆಗೆದುಕೊಂಡ್ರೆ ಮೂರೇ ಮೂರು ಸಾವಿರ ದಿನಗಳು ಬದುಕೋ‌ ನಾವು ಶ್ರಮಪಡುವುದಷ್ಟೇ ನಮ್ಮ ಕೆಲಸವಾಗಿರಬೇಕು. ಅದನ್ನ ಬಿಟ್ಟು ಕಾಲ-ಗಳಿಗೆ ನಾನೆಣಿಸಿದಂತ್ಯಾಕಿಲ್ಲ ಅಂತ ಕೊರಗೋ ಕೆಲಸವನ್ನ ಯಾವೊಬ್ಬ ಮನುಷ್ಯನೂ ಮಾಡಬಾರದು. 

ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada

ಈ ಧರೆಗೆ ಹಗಲು-ರಾತ್ರಿಗಳ ಸಂಬಂಧಗಳಿವೆ, ಅದೇ ರೀತಿ ಮಾನವನಿಗೆ ಹುಟ್ಟು ಸಾವಿನ ಗಡಿರೇಖೆಯೂ ಇದೆ. ಆಗೊಮ್ಮೆ ಈಗೊಮ್ಮೆ ಕಾಣಿಸಿಕೊಳ್ಳೋ ಗ್ರಹಣ,‌ ಮಳೆ-ಬಿರುಗಾಳಿಗೆ ಭೂಮಿಯೇ ನಲಿನಲಿದು ಅನುಭವದ ಸಾರಗಳಲ್ಲಿ ಸಾಗುತ್ತಿದೆ. ಅಂತಹದ್ರಲ್ಲಿ ನಾವೆಣಿಸದ ಲೈಫು ನಾನೆಣಿಸಿದ ಟೈಪು ಅನ್ನೋ ಹುಳುಕು ತಲೆಗಳಿಗೆ ಅದ್ಯಾಕೆ ಅರ್ಥವಾಗ್ತಿಲ್ಲ. ಹಿಂದೆ ಪಡೆದ ಇಂದು ಹೊತ್ತ ಕರ್ಮದಾ ಬುತ್ತಿಗನುಸಾರವಾಗಿ ಬಾಳ ಕಂದಕ-ಕಾರ್ಮೋಡ, ಶಿಖರ ಇವೆಲ್ಲವೂ ಸೃಷ್ಟಿಯಾಗಿರುತ್ತದೆ. ನಾವೇನು ಸೃಷ್ಟಿಸಲು ಸಾಧ್ಯವಿಲ್ಲ ಎಲ್ಲವೂ ದೇವನ ಆಣತಿಯಂತೆ ಮೊಗ್ಗಾಗಿ ಹೂವಾಗಿ ಮುದುಡಿ ಮಸಣ ಸೇರುವುದಷ್ಟೇ ಕಾಯಕ.

ಕನ್ನಡ ವಾಟ್ಸ್ ಆಪ್ ಸ್ಟೇಟಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಮೇಘದತ್ತ ತಮ್ಮ ಬಳಿ ಇಷ್ಟೇ ಕೇಳಿಕೊಳ್ಳುತ್ತಿದ್ದಾನೆ ನಾನು‌,ನನ್ನದು,‌ನಾನೆಣಿಸಿದಂತೆ,‌ ನನ್ನಾಣತಿ ಇಂತಹ ಮಂದ ಬುದ್ದಿಯ ವಿಚಾರಧಾರೆಗಳನ್ನ ಇಂದಿಗೇ ಬಿಟ್ಟುಬಿಡಿ. ಹುಟ್ಟಿಸಿದ ದೇವನು ಹೋರಾಟದ ಹಾದಿಯನ್ನ ಕೊಟ್ಟಿಹನು ಪಾಪ-ಪುಣ್ಯದ ತಕ್ಕಡಿ ಹಿಡಿದು ಹೊರಡೋ ಒಂದೊಂದು ಹಾದಿಯಲ್ಲೂ ಒಂದೊಂದು ಅನುಭವದ‌ ಬುತ್ತಿ‌ ತೆರೆದುಕೊಳ್ಳುತ್ತೆ. ಅದಕ್ಕಾಗಿ ಚಿಂತಿಸಿ ಚಿತ್ರವಿಚಿತ್ರವಾಗುವ ಚಿತ್ತವಿಕಾರತೆಯನ್ನ ಹೊಡೆದೋಡಿಸಿದರಷ್ಟೇ ಬದುಕು ಸಾರ್ಥಕತೆಯ ತಿರುವನ್ನ ಪಡೆಯುತ್ತೆ. 

🐘🐅 ದತ್ತರಾಜ್ ಪಡುಕೋಣೆ 🐅🐘

Kannada Kavanagalu | Preetiya Kavana – #06

Kannada Kavanagalu | Preetiya Kavana – #02

Kannada Kavanagalu | Preetiya Kavana – #01

Kannada Nudimuttugalu – Ver.03

Nimagu Ee Blog Nalli Post Maadabekemba Aasey iddare

Love stories, Nimma Kavana, Nudimuttugalanna

email maadi – kannadanewslive01@gmail.com

Similar Articles

Top