ಅವನು‌ ನಿನ್ನ ಪ್ರೀತಿಸ್ತಿದ್ದಾನೆ.. ಹಾಗಾಗಿ ನನ್ನ ನಿನ್ನ ದೂರ ಮಾಡೋಕೆ ಈ ಕಥೆ ಕಟ್ಟಿದ್ದಾನೆ…

ಅಂದುಕೊಂಡಿದ್ದು ಯಾವ್ದೂ ಯಾವ್ ದಂದ್ರೆ ಯಾವ್ದು ಕೂಡ ಸರಿಯಾಗಿ ನಡೀತಾ ಇರ್ಲಿಲ್ಲ. ಸೋಲು ಇರುವುದೇ ನನ್ನನ್ನು, ನನ್ನೊಬ್ಬನನ್ನೇ ಸೋಲಿಸಲು ಇದೆ ಅಂತ ಜಿಗುಪ್ಸೆಗೊಂಡಿದ್ದ… ಲೈಫ್ ಬರ್ಬಾದ್ ಆಗಿದೆ.. ಅದಕ್ಕೊಂದು ಫುಲ್ ಸ್ಟಾಪ್ ಇಟ್ಟುಬಿಡೋದೇ ಲೇಸು ಅನ್ನೋ ತೀರ್ಮಾನಕ್ಕೆ ಬಂದಿದ್ದ ಕವೀಶ್ ಗೆ ಬದುಕು ಇಷ್ಟೇ ಅಲ್ಲ ಇನ್ನೂ ಇದೆ ಎಂದು ಹೇಳಿಕೊಟ್ಟವಳು ಸುಪ್ರಿಯಾ..

ಆದರೆ ಕವೀಶ್ ಮಾತ್ರ…?
ದುಡುಕು ಸ್ವಭಾವದ ಕವೀಶ್ ಗಡಿಬಿಡಿ ಹುಡ್ಗ.. ಸಮಾಧಾನ ಅಂದ್ರೆ ಏನು ಅಂತ ಅವನಿಗೆ ಗೊತ್ತಿರಲಿಲ್ಲ.. ತೆಗೆದುಕೊಳ್ತಿದ್ದ ನಿರ್ಧಾರವೆಲ್ಲಾ ಅವಾಂತರಕ್ಕೆ, ಸೋಲಿಗೆ ಕಾರಣವಾಗಿರ್ತಿದ್ವು. ಕೈ ಹಾಕಿದ ಬ್ಯುಸ್ ನೆಸ್ ಎಲ್ಲವೂ ಸರಿಯಾದ ಪ್ಲ್ಯಾನ್ ಇಲ್ದೆ ನೆಲಕಚ್ಚುತ್ತಿದ್ವು.. ಆ ಸೋಲುಗಳಿಗೆ ಅವನ ಮುಂಗೋಪ ಕೂಡ ಕಾರಣ ಅಂದ್ರೆ ಬಹುಶಃ ತಪ್ಪಾಗಲ್ಲ.

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ಲೈಫ್ ನಲ್ಲಿ ಪದೇ ಪದೇ ಕಂಡ ಸೋಲಿನಿಂದ ನೊಂದಿದ್ದ ಆತ ಬದುಕೇ ಸಾಕೆಂಬ ತೀರ್ಮಾನ ತೆಗೆದುಕೊಂಡ.. ಸೂಸೈಡ್ ಅಟೆಮ್ಟ್ ಮಾಡಿದ … ಅವನು ಫ್ಯಾನಿಗೆ ನೇಣು ಹಾಕಿಕೊಂಡಿದ್ದನ್ನು ಅದೃಷ್ಟವಶಾತ್ ನೋಡಿದ್ರು ಅಣ್ಣಾ ಸುಕೇಶ್, ಅವನ ಜೀವ ಉಳಿಯಿತು. ವಾರವಾಗುವ ಮುನ್ನ ವಿಷ‌‌ ಕುಡಿದ.. ಮತ್ತೆ ಬದುಕಿಸಲಾಯಿತು… ಅವನು ಮೊದಲಿನಂತಾಗಲಿಲ್ಲ..‌ ಮಾನಸಿಕವಾಗಿ ಸಂಪೂರ್ಣ ಕುಗ್ಗಿ ಹೋಗಿದ್ದ ಕವೀಶ್ ನನ್ನು ಮನೋವೈದ್ಯರಿಗೆ ತೋರಿಸಲಾಯಿತು. ಪ್ರತಿಷ್ಠಿತ ಮಾನಸಿಕ ಆಸ್ಪತ್ರೆಯಲ್ಲಿ ಅವನಿಗೆ ಚಿಕಿತ್ಸೆ ಕೊಡಿಸಲು ಕರೆದೊಯ್ದರು. ಅವನನ್ನು ಪರೀಕ್ಷಿಸಿದ ವೈದ್ಯರು ಟ್ರೈನಿಯಾಗಿದ್ದ ಸುಪ್ರಿಯಾಗೆ ಈ ಪೇಷೆಂಟ್ ಕೇರ್ ತಗೋಳಿ ಅಂತ ಹೇಳಿದ್ರು. ಸುಪ್ರಿಯಾ ಕವೀಶ್ ಗೆ ಚಿಕಿತ್ಸೆ‌ ನೀಡಲಾರಂಭಿಸಿದರು..‌ ನಿಧಾನಕ್ಕೆ ಹಂತ ಹಂತವಾಗಿ ಕವೀಶ್ ಸುಧಾರಿಸಿಕೊಂಡ… ಅವನು ಸಂಪೂರ್ಣ ಚೇತರಿಸಿಕೊಳ್ಳುವಷ್ಟರಲ್ಲಿ ಸುಪ್ರಿಯಾ ಟ್ರೈನಿಂಗ್ ಕೂಡ ಮುಗಿಯಿತು. ಅವಳ ಮಾವನ ಮಗನ ಹಾಸ್ಪಿಟಲ್ ನಲ್ಲಿ ಮನೋವೈದ್ಯಳಾಗಿ ಸೇವೆ ಆರಂಭಿಸಿದಳು… ಕವೀಶ್ ಸಲಹೆ , ಸೂಚನೆಯನ್ನು ಅವಳೇ ಮುಂದುವರೆಸಿದ್ದಳು .. ಕವೀಶ್ ಬದಲಾದ .. ಹೋಟೆಲ್ ಬ್ಯುಸ್ ನೆಸ್ ಆರಂಭಿಸಿದ.. ಸುಪ್ರಿಯಾ ಅವನ ಬೆನ್ನಿಗಿದ್ದಳು… ಹೆಚ್ಚು ಕಮ್ಮಿ ಒಂದು – ಒಂದುವರೆ ವರ್ಷದ ಒಡನಾಟ ಹಾಗೂ ಹೆಚ್ಚು ‌ಕಮ್ಮಿ ಒಂದೇ ಏಜಿನವರಾಗಿದ್ರಿಂದಲೋ ಏನೋ ಗೊತ್ತೋ ಗೊತ್ತಿಲ್ಲದೆ ಆತ್ಮೀಯತೆ ಬೆಳೆದಿತ್ತು ‌..

ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada

ಸುಪ್ರಿಯಾ ಒಬ್ಬ ಸೈಕ್ಯಾಟ್ರಿಸ್ಟ್ ಅನ್ನೋದಕ್ಕಿಂತ ಹೆಚ್ಚಾಗಿ ಕವೀಶ್ ಗೆ ಸ್ನೇಹಿತೆಯಾಗಿ ಶಕ್ತಿಯಾಗಿದ್ದಳು.. ನೀವು ನಂಬ್ತೀರೋ? ಬಿಡ್ತಿರೋ ಅವಳು ಅವನ ಬ್ಯುಸ್ ನೆಸ್ ಗೆ ಹಣ ಸಹಾಯವನ್ನು ಕೂಡ ಮಾಡಿದ್ದಳು..
ಅದಾಗಲೇ ಮದುವೆ ವಯಸ್ಸು ಇಬ್ಬರಿಗೂ ಮೀರುತ್ತಿತ್ತು . ಇಬ್ಬರ ಮನೆಯಲ್ಲಿ ಮದುವೆ ಪ್ರಸ್ತಾಪ…ಆಗ ಶುರುವಾಗಿದ್ದೇ ಅಸಲಿ ಆಟ ..!
ಒಬ್ಬಳೇ ಮಗಳನ್ನು ತನ್ನ ಪ್ರತಿಷ್ಠೆ, ಆಸ್ತಿ- ಅಂತಸ್ತಿಗೆ ತಕ್ಕದಾದ ಹುಡ್ಗನಿಗೆ ಕೊಟ್ಟು ಮದ್ವೆ ಮಾಡ್ಬೇಕು ಅನ್ನೋದು ಸುಪ್ರಿಯಾ ತಂದೆ ಅಮರೇಂದ್ರ ಮತ್ತು ತಾಯಿ ಮಾಲತಿ ಅವರ ಆಸೆಯಾಗಿತ್ತು.. ಅದು ಎಲ್ಲಾ ತಂದೆ – ತಾಯಿಗೂ ಮಗಳು ಚೆನ್ನಾಗಿರಬೇಕೆಂಬ ಆಸೆ ಸಹಜವೇ …ಆದರೆ ಮಕ್ಕಳ ಮನಸ್ಸು ?

Love Story : ಮದುವೆ ದಿನ ಹತ್ತಿರ ಬರ್ತಿದ್ದಂತೆ ಅದಿತಿಗೆ ಮನಸ್ಸು ಭಾರ….

ಹ್ಞೂಂ ..‌ಹಾಗೆಯೇ ಸುಪ್ರಿಯಾ ಮನಸ್ಸಲ್ಲೂ ಅದಾಗಲೇ ಪ್ರೀತಿ ಅರಳಿತ್ತು .. ಹಹಹ ನಿಮ್ಮ ಗೆಸ್ ಆ ಪ್ರೇಮಿ ಕವೀಶ್ ಅಂತ ಅಲ್ವಾ? ಇಲ್ಲ…. ಸುಪ್ರಿಯಾ ಪ್ರೀತಿಸುತ್ತಿದ್ದುದು ಕವೀಶ್ ಸ್ನೇಹಿತ ಸೌರವ್ ನನ್ನು …ಈ ಸೌರವ್ ಯಾರು ಅಂದ್ರಾ? ಕವೀಶ್ ನ ಬಾಲ್ಯದ ಗೆಳೆಯ… ಚಿಕ್ಕಂದಿನಿಂದ ಜೊತೆಗೇ ಇದ್ದವ …. ತನ್ನದೇಯಾದ ಕಂಪ್ಯೂಟರ್ ತರಬೇತಿ ಕೇಂದ್ರ ನಡೆಸ್ತಿದ್ದ, ಕವೀಶ್ ಸಣ್ಣದಾಗಿ ಪ್ರಾರಂಭಿಸಿದ ಹೋಟೆಲ್ ಉದ್ಯಮಕ್ಕೆ ಒಂದು ಕಡೆಯಿಂದ ಬಲ ತುಂಬಿದ್ದು, ಇನ್ನೂಂದು ಕಡೆಯಿಂದ ಸಾಥ್ ನೀಡಿದ್ದು ಇದೇ ಸೌರವ್ .
ಸುಪ್ರಿಯಾ – ಸೌರವ್ ಜೊತೆ ಕ್ಲೋಸ್ ಇರೋದು ಕವೀಶ್ ಗೂ ಗೊತ್ತಿರ್ಲಿಲ್ಲ …

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಆಗೊಮ್ಮೆ ಈಗೊಮ್ಮೆ ಮಾತಾಡ್ತಿದ್ದುದು ಮಾತ್ರ ಕವೀಶ್ ಗೆ ಗೊತ್ತಿತ್ತು . ಅದಕ್ಕೂ ಮಿಗಿಲಾಗಿ ಸೌರವ್ ಅಂಬಿಕಾಳನ್ನು ಪ್ರೀತಿಸ್ತಿದ್ದ …ಅಂಬಿಕಾ ಯಾರ್ ಗೊತ್ತಾ? ಕವೀಶನ ತಂಗಿ ( ಚಿಕ್ಕಪ್ಪನ ಮಗಳು) ಗೆಳೆಯ ಸೌರವ್ ಮತ್ತು ಅಂಬಿಕಾ ಪ್ರೀತಿ ವಿಚಾರ ಮನೆಯಲ್ಲಿ ಮಾತಾಡಿ ಮದುವೆ ಮಾಡಿಸುವ ಯೋಚ್ನೆ ಮಾಡಿದ್ದ ಕವೀಶ್ .. ಇತ್ತ ತನಗೊಂದು ಹೊಸ ಬದುಕುಕೊಟ್ಟಿದ್ದಲ್ಲದೆ, ಬದಲಾಯಿಸಿ ಉದ್ಯಮಕ್ಕೂ ಸಾಥ್ ಕೊಟ್ಟು ಸದಾ ತನ್ನ ಜೊತೆ ಖುಷಿ ಖುಷಿಯಿಂದ ಇದ್ದ ಸುಪ್ರಿಯಾ ಮೇಲೆ ಪ್ರೀತಿ ಹುಟ್ಟಿತ್ತು …
ಮನೆಯಲ್ಲಿ ಮದ್ವೆ ಒತ್ತಡ ಹೆಚ್ಚಾದ ಕೂಡಲೇ ಇನ್ನು ತಡಮಾಡಲಾಗಲ್ಲ ಅಂತ ಗೊತ್ತಾದ ಮೇಲೆ ಸುಪ್ರಿಯಾ ಸೌರವ್ ಮುಂದೆ ಮದುವೆ ಪ್ರಸ್ತಾಪ ಇಟ್ಟಳು …ಸೌರವ್ ವ್ಹೇಟ್ ಮಾಡು ವ್ಹೇಟ್ ಮಾಡು ಎಂಬ ಒಂದೇ ಪದವನ್ನು ಹೇಳ್ತಿದ್ದಾಗ .. ನೇರವಾಗಿ ಕವೀಶ್ ಹತ್ರ ತನ್ನ ಪ್ರೀತಿ ವಿಚಾರ ಮಾತನಾಡಿದಳು..

ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

ಸೌರವ್ ಮತ್ತು ನಾನು ಒಬ್ಬರನ್ನೊಬ್ಬರು ಪ್ರೀತಿಸ್ತಿದ್ದೀವಿ …ಪರಿಸ್ಥಿತಿ ಹೇಳಿದರೂ ಅರ್ಥ ಮಾಡಿಕೊಳ್ಳದೆ ವ್ಹೇಟ್ ಮಾಡು ಅಂತ ಸೌರವ್ ಹೇಳ್ತಿದ್ದಾನೆ . ನೀನೇ ಮಾತಾಡಿ ಒಪ್ಪಿಸು ಅಂತ ಸುಪ್ರಿಯಾ ಕವೀಶ್ ಕೈ ಹಿಡಿದು ಬೇಡಿಕೊಂಡಾಗ ಕವೀಶ್ ಗೆ ಆಕಾಶವೇ ಕಳಚಿ ತಲೆ ಮೇಲೆ ಬಿದ್ದ ಅನುಭವ …

ಕನ್ನಡ ವಾಟ್ಸ್ ಆಪ್ ಸ್ಟೇಟಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಧಾರಿಸಿಕೊಂಡು ಅಂಬಿಕಾ ಮತ್ತು ಸೌರವ್ ಲವ್ ಮಾಡ್ತಿದ್ದಾರೆ .. ನೀನು ದಿಢೀರ್ ಅಂತ ಹೀಗೆ ಹೇಳಿದ್ರೆ? ಅವನಿಗೆ ನಿನ್ನ ಮೇಲೆ ಅಂತ ಭಾವನೆ ಇರೋಕೆ ಚಾನ್ಸೇ ಇಲ್ಲ ಅಂತ ಕವೀಶ್ ಸೌರವ್ ಪರ ಬ್ಯಾಟ್ ಬೀಸಿದ … ಸುಪ್ರಿಯಾ ಕೂಗಾಡಿ ಸೌರವ್ ಬಳಿ ಹೋದಳು.. ಕವೀಶ್ ಹೇಳಿದ್ದನ್ನು ಪ್ರಶ್ನಿಸಿದಳು … ಸೌರವ್ ಅವೆಲ್ಲಾ ಸುಳ್ಳು ಅವನು‌ ನಿನ್ನ ಪ್ರೀತಿಸ್ತಿದ್ದಾನೆ.. ಹಾಗಾಗಿ ನನ್ನ ನಿನ್ನ ದೂರ ಮಾಡೋಕೆ ಈ ಕಥೆ ಕಟ್ಟಿದ್ದಾನೆ ಅಂದ… ಆಗ ಛೇ .. ಸುಮ್ನಿರು ಕವೀಶ್ ಬಗ್ಗೆ ಮಾತಾಡ್ಬೇಡ .. ಅಂಬಿಕಾ ಅವನ ತಂಗಿ , ಅವಳ ಬಗ್ಗೆ ಅವನು ಸುಮ್ನೆ ಹೇಳ್ತಾನಾ ಅಂತ ಪ್ರಶ್ನೆ ಮಾಡಿದಳು .. ಕವೀಶನ ಡೈರಿಯಲ್ಲಿ ಸುಪ್ರಿಯಾ ಬಗ್ಗೆ ಗೀಚಿದ್ದ ಸಾಲುಗಳನ್ನು, ಅವನ ರೂಮ್ ನ‌ ಕಬೋರ್ಡನಲ್ಲಿದ್ದ ಅವಳ ( ಸುಪ್ರಿಯಾ) ಗ್ಲಾಸ್, ದುಪ್ಪಟ್ಟದ ಫೋಟೋವನ್ನು ಹಾಗೂ ಒಮ್ಮೆ ಪಾರ್ಟಿ ಮಾಡುವಾಗ ಗೆಳೆಯನೆಂದು ನಂಬಿ ಕವೀಶ್ ಸುಪ್ರಿಯಾಳ ಬಗ್ಗೆ ಆಡಿದ್ದ ಪ್ರೀತಿ ಮಾತುಗಳ ವಿಡಿಯೋ ತುಣಕನ್ನು ಸೌರವ್ ತೋರಿಸಿದ ..

Kannada Kavanagalu | Preetiya Kavana – #06

ಅದನ್ನು ನೋಡಿದ ಸುಪ್ರಿಯಾ ಕವೀಶ್ ನನ್ನು ಕೀಳಾಗಿ ಭಾವಿಸಿ,‌ ಸೌರವ್ ಮಾತನ್ನು ನಂಬಿದಳು .. ಅಷ್ಟೊತ್ತಿಗೆ ಅಲ್ಲಿಗೆ ಅಂಬಿಕಾ ಮತ್ತು ಕವೀಶ್ ಬಂದರು .. ಅಂಬಿಕಾ ಕೊರಳುಪಟ್ಟಿ ಹಿಡಿದು ಸೌರವ್ ಗೆ ಸತ್ಯ ಬೊಗಳು.. ನಾವು ಪ್ರೀತಿಸಿಲ್ವಾ ಅಂತ ಕೇಳಿದ್ಳು … ಅದಕ್ಕವನ ಉತ್ತರ .. ‘ ಓಹೋ ಅಣ್ಣನ ಪ್ರೀತಿ ಉಳಿಸಿ, ಅವನನ್ನು ಹೀರೋ ಮಾಡಲು .. ಈ ಡ್ರಾಮಾನಾ’? ಅಂದ .. ಕವೀಶ್ ಗೆ ಛೇ ಗೆಳೆಯನೆಂದು ವಿಷಜಂತುನಾ ನಂಬಿದೆನಲ್ಲಾ .. ಮನೆಯಲ್ಲಿ ಮಾತಾಡಿ, ನಾನೇ ಮುಂದೆ ನಿಂತು ಈ ಕ್ರಿಮಿಗೆ ತಂಗಿಯನ್ನು ಮದುವೆ ಮಾಡ್ತಿದ್ನಲ್ಲ .. ಅಂತ ಬೇಸರದಿಂದ ತಲೆತಗ್ಗಿಸಿದ .. ” ನಾನು ಪ್ರೀತಿಸಿ, ಸುತ್ತಾಡಿದ್ದು ಈ ನೀಚನ ಜೊತೆಗಾ ‘? ಅಂತ ಅಂಬಿಕಾ ಕೂಡ ತಲೆತಗ್ಗಿಸಿದಳು…

Kannada Kavanagalu | Preetiya Kavana – #01

ಅತ್ತ ಸುಪ್ರಿಯಾ ಸೌರವ್ ನನ್ನು ತನ್ನ ಮನೆಗೆ ಕರೆದುಕೊಂಡು ಹೋದಳು … ಸೌರವ್ ನನ್ನು ನೋಡ್ತಿದ್ದಂತೆ ಮನೆಕೆಲಸದವ್ಳು ತನ್ನ ಕೈಯಲ್ಲಿ ಪೊರಕೆಯಲ್ಲಿ ಹೊಡೆದಳು .. ಸುಪ್ರಿಯಾ , ಅವಳ ತಂದೆ, ತಾಯಿಗೆ ಏನಾಗ್ತಿದೆ ಅಂತ ಅರ್ಥವಾಗಲಿಲ್ಲ .. ಹಿಗ್ಗಾಮುಗ್ಗ ತದುಕುತ್ತಿದ್ದ ಕೆಲಸದಾಕೆ ಮೀನಾಕ್ಷಿಯನ್ನು ಯಾಕಮ್ಮ , ಏನಾಯ್ತು ಅಂತ ಕೇಳಿದಾಗ ‌. ಆಕೆ ಅಳುತ್ತಾ ಹೇಳಿದಳು … ಈತ ನನ್ನ ಮಗಳನ್ನು ಮದ್ವೆ ಆಗ್ತೀನಿ ಅಂತ ನಂಬಿಸಿ , ಬಸರಿ ಮಾಡಿದ್ದ .. ಮದ್ವೆ ಮಾಡ್ಕೋ ಅಂತ ಹೋದಾಗ… ದುಡ್ಡು ಕೊಡ್ತೀನಿ .. ಅವರಿವರ ಮನೆ ಕೆಲಸ ಮಾಡ್ಕೋಂಡು ಜೀವನ ಮಾಡೋ ನಿನ್ನ ಮಗಳನ್ನು ನಾನು ಕಟ್ಕೋ ಬೇಕಾ? ದುಡ್ಡಲ್ಲಿ ಅಳೆದು, ಅವಳನ್ನು ಅವಮಾನಿಸಿದ .. ಅದಾದ ಮೇಲೆ ನನ್ನ ಮಗಳು ಮಾನಸಿಕವಾಗಿ ಕುಗ್ಗಿದ್ದಳು .. ಈ ಸುಪ್ರಿಯಾಮ್ಮನೇ ಗುಣಪಡಿಸಿದ್ದು, .. ಆಗ ಅವರಿಗೆ ಈ ಮಹಾನುಭಾವನಿಂದಾಗಿದ್ದು ಅಂತ ಗೊತ್ತಿರ್ಲಿಲ್ಲ … ನಾವು ಕೂಡ ಈ ಕಾಮ ಪಿಶಾಚಿ ಹೆಸ್ರು ಹೇಳಿರ್ಲಿಲ್ಲ .. ಪುಣ್ಯಾತ್ಮ ನನ್ನ ಅಣ್ಣನ ಮಗ ಅವಳನ್ನು ಕಟ್ಟಿಕೊಂಡು ಬಾಳು ಕೊಟ್ಟಿದ್ದಾನೆ… ಆದ್ರೂ ಈ ಚಂಡಾಲ …. ಅಂತ ಮತ್ತೆರಡು ಅವನ ಕಪಾಳಿಕ್ಕೆ ಹೊಡೆದಳು ..

Kannada Nudimuttugalu – Ver.03

ಸುಪ್ರಿಯಾಗೆ ಇವನು ಪುಸಲಾಯಿಸಿದ್ದು , ಅವೆಲ್ಲಾ ಮದ್ವೆ ಆದ್ಮೇಲೆ ಅಂತ ಅವಳು ಮುಂದುವರೆಯದೇ ಇದ್ದುದೆಲ್ಲಾ ನೆನಪಾಯ್ತು ..‌ಸೌರವ್ ಗೆ ಅವಳೂ ಒಂದೆರೆಡು ಬಿಗಿದು ಮನೆಯಿಂದ ಆಚೆ ಹಾಕಿದಳು ..
ಎಲ್ಲಾ ಕಥೆ ಗೊತ್ತಾದಮೇಲೆ ಸೌರವ್ ಮನೆಯವರೇ ಅವನನ್ನು‌ ಮನೆಯಿಂದ ಆಚೆ ಹಾಕಿದ್ರು .. ಸೌರವ್ ತಮ್ಮ ಗೌರವ್ ಅಂಬಿಕಾಳನ್ನು ಮದುವೆಯಾದ .. ಸುಪ್ರಿಯಾ ಮತ್ತೆ ಕವೀಶ್ ನನ್ನು ಹುಡುಕಿಕೊಂಡು ಬರುವಷ್ಟರಲ್ಲಿ ತನ್ನ ಉದ್ಯಮವನ್ನೆಲ್ಲಾ ಅಣ್ಣ ಸುಕೇಶ್ ಗೆ ಒಪ್ಪಿಸಿ ಕವೀಶ್ ಮನೆ ಬಿಟ್ಟು ತೆರಳಿದ್ದ ..ಅವನನ್ನು ಹುಡುಕಿ ಹುಡುಕಿ ಸುಸ್ತಾದ ಮೇಲೆ ಕೊನೆಗೂ ಅವನು ಸಿಕ್ಕ .. ಸರ್ವಸಂಗ ಪರಿತ್ಯಾಗಿಯಾಗಿ .. ಕಾವಿತೊಟ್ಟಿದ್ದ … ಸುಪ್ರಿಯಾ ಕೂಡ ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ .. ಮಾನಸಿಕವಾಗಿ ಅವಳು ಕುಗ್ಗಿದ್ದಾಳೆ … ಮತ್ತೆ ಕವೀಶ್ ಬರುತ್ತಾನೆಂದು ಕಾಯ್ತಿದ್ದಾಳೆ .. ಸೌರವ್ ಪಶ್ಚಾತ್ತಾಪ ಪಡುತ್ತಾ .. ತನ್ನ ತಪ್ಪಿಗೆ ಪ್ರಾಯಶ್ಚಿತ ಎಂಬಂತೆ ಶೋಷಣೆಗೆ ಒಳಗಾದ ಹೆಣ್ಣುಮಕ್ಕಳಿಗಾಗಿ ಶ್ರಮಿಸ್ತಿದ್ದಾನೆ ..

  • ಆಗುಂಬೆ ಹುಡುಗ

Follow us on Telegram App

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

Kannada Kavanagalu | Preetiya Kavana – #05

Similar Articles

Top
error: Content is protected !!