ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

real kannada love story | ಕನ್ನಡ ಲವ್ ಸ್ಟೋರಿ, ಕನ್ನಡ ಪ್ರೇಮ ಕಥೆಗಳು, ಮಕ್ಕಳ ಕಥೆಗಳು, ಕಥೆಗಳು, ಸಾಧಕರ ಕಥೆಗಳು,

ಲೈಫ್ ಸೂಪರ್ ಆಗಿ ನಡೆದುಕೊಂಡು ಹೋಗ್ತಿತ್ತು. ಅಪ್ಪ, ಅಮ್ಮ, ಅಣ್ಣ, ಅತ್ತಿಗೆ ಮತ್ತು ಮುದ್ದಾದ ಮಡದಿ ಜೊತೆ ಅವನದ್ದು ಸುಖೀ ಸಂಸಾರ. ಮದ್ವೆಯಾಗಿ ಒಂದೇ ಒಂದು ವರ್ಷವಾಗಿತ್ತು. ಇನ್ನೇನು ಐದಾರು ತಿಂಗಳಲ್ಲಿ ಮನೆಗೆ ಮತ್ತೊಬ್ಬ/ಳು ಅತಿಥಿ ಬರೋಕೆ ರೆಡಿಯಾಗಿದ್ರು.. ಅರ್ಥಾತ್ ಅವನು ಅಪ್ಪನಾಗುವ ಕಾಲ ಸನ್ನಿಹಿತವಾಗಿತ್ತು … ಅಷ್ಟರಲ್ಲೇ ಅವನ ಲೈಫ್ ಗೆ ಬಂದ ಅವಳು ಅವನ ಬದುಕನ್ನು ಮಾತ್ರವಲ್ಲ ಅವನ ಕುಟುಂಬ ಮತ್ತು ಅವನಾಕೆಯ ( ಪತ್ನಿ) ಕುಟುಂಬವನ್ನೂ ಕಣ್ಣೀರಲ್ಲಿ ಕಾಲ ಕಳೆಯುವಂತೆ ಮಾಡ್ಬಿಟ್ಟಳು ‌‌..! ಮುಂದೆ?

ಲವ್ ಸ್ಟೇಟಸ್ | ಪ್ರೀತಿಯ ಕವನಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಂಪತ್ ಅಲ್ಲಿ ಇಲ್ಲಿ ಒಂದಿಷ್ಟು ಸಂಪಾದನೆ ಮಾಡಿ , ಅಷ್ಟೋ ಇಷ್ಟೋ ಕೂಡಿಟ್ಟು ಅಪ್ಪ – ಅಮ್ಮ, ಅಣ್ಣ – ಅತ್ತಿಗೆಯ ಜೊತೆಗೆ ಖುಷಿ ಖುಷಿಯಾಗಿದ್ದ . ವಯಸ್ಸು 28 ಆಗುವಷ್ಟರಲ್ಲಿ ಮನೆಯವರು ನೋಡಿದ ಹುಡ್ಗಿಯ ಕೈ ಹಿಡಿದ … ಅವಳು ದೀಪ. ಸುಂದರ ಸಂಪತ್ ಕುಟುಂಬದ ಖುಷಿ ದೀಪ ಬಂದ್ಮೇಲೆ ಮತಷ್ಟು ಹೆಚ್ಚಿತ್ತು. ಒಂದು ನಾಲ್ಕೈದು ವರ್ಷ ದುಡಿದಿದ್ದ ಸಂಪತ್ ತನ್ನದೆಯಾದ ಉದ್ಯಮ ಶುರುಮಾಡಿದ. ಅವನು ಆರಂಭಿಸಿದ ಈವೆಂಟ್ ಮ್ಯಾನೆಜ್‌ಮೆಂಟ್‌ ಕಂಪನಿ ಸಕ್ಸಸ್ ಆಯ್ತು ..

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ಹೀಗೇ ಅವನ ಲೈಫ್ ಮತ್ತು ಫ್ಯಾಮಿಲಿ ಲೈಫ್ ಬಿಂದಾಸ್ ಆಗಿರುವಾಗಲೇ ಅವನ ಲೈಫಗೆ ಹೊಸದಾಗಿ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ!
MBA ಓದ್ತಿದ್ದ ಚಂದನಾ ಇಂಟರ್ನ್ ಶಿಪ್ ಗೆಂದು ಬೆಂಗಳೂರಿನ ಕಂಪನಿಯೊಂದನ್ನು ಆಯ್ಕೆ‌ ಮಾಡಿಕೊಂಡಿದ್ಲು ..ಊರಿಂದ ಓಡಾಡೋದು ಬೇಡ ಅಂತ ಪಿಜಿಯಲ್ಲಿ ಇರಬೇಕೆಂದ್ಲಿದ್ಲು.. ಆದರೆ, ದೀಪಾ ಒಂದು ತಿಂಗಳು ಮಾತ್ರವಲ್ಲ ಅಂತ ಅತ್ತೆ, ಮಾವ , ಪತಿ, ಅಕ್ಕ- ಭಾವ ಎಲ್ಲರೊಡನೆ ಮಾತಾಡಿ ಮನೆಯಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಳು ..
ಒಂದೆರಡು ದಿನ ಕಳೆದಂತೆ ಸಂಪತ್ ಜೊತೆಗೆ ಸಲುಗೆ ಹೆಚ್ಚಿತು .. ಪಿಕಪ್, ಡ್ರಾಪ್ ಶುರುವಾಯಿತು .. ಇದನ್ನು ಗಮನಿಸಿದ ಸಂಪತ್ ಅಣ್ಣ – ಅತ್ತಿಗೆಗೆ ನಿಧಾನಕ್ಕೆ ಎಚ್ಚರಿಸಿದರು .. ಸಂಪತ್ ಕೇಳಲಿಲ್ಲ .. ಅಪ್ಪ – ಅಮ್ಮ ಖಾರವಾಗಿಯೇ ಹೇಳಿದರು .., ದೀಪಾ ಸ್ನೇಹಿತೆ ಚಂದನಾಗೇ ಬುದ್ಧಿ ಹೇಳಿದ್ಲು … ಇಲ್ಲ ಸಂಪತ್ – ಚಂದನ ಬದಲಾಗಲೇ ಇಲ್ಲ ‌.. ಮನೆ ಮಂದಿ ಎಲ್ಲಾ ನೇರಾ ನೇರವಾಗಿ ಚಂದನಾಗೆ ಮನೆ ಬಿಡುವಂತೆ ಹೇಳಿದರು .. ಸಂಪತ್ ಅದಕ್ಕೆ ಅವಕಾಶ ಮಾಡಿಕೊಡಲಿಲ್ಲ .. ಕಾಮಲೆ ಕಣ್ಣಿಂದ ನೋಡ್ಬೇಡಿ ಅಂತ ಬಿಟ್ಟಿ ಉಪದೇಶ ಮಾಡಿದ .. ಇನ್ನೇನು 10- 15 ದಿನ ಹೋಗ್ತಾಳೆ ಬಿಡಿ ಅಂತ ಪತ್ನಿ,ಅಪ್ಪ – ಅಮ್ಮ, ಅಣ್ಣ- ಅತ್ತಿಗೆ ಬಾಯಿ ಮುಚ್ಚಿಸಿದ …

ನಾ ಕಂಡ ಪ್ರೀತಿ ಸುಂದರ ಹೂದೋಟ…. | Best Love Quotes in kannada

ಕೊನೆಗೆ ಚಂದನಾ ಇಂಟರ್ನ್ ಶಿಪ್ ಮುಗಿಯಿತು . ಊರಿಗೆ ಹೋದಳು ..ಸಂಪತ್ ಸಪ್ಪಗಾದ.. ಆದರೆ, ಅವನ ಮನೆಯವರು ನೆಮ್ಮದಿ ಕಂಡರು ‌.!
ಆದರೆ ಅವರಿಗೆ ಆ ಖುಷಿ ಹೆಚ್ಚು ದಿವಸ ಉಳಿಯಲಿಲ್ಲ . ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ವಾಪಾಸ್ಸಾದ ಚಂದನಾ ಸಂಪತ್ ಮೂಲಕ ಮತ್ತೆ ಅವರ ಮನೆಯಲ್ಲಿ ಆಶ್ರಯ ಪಡೆದಳು .. ಪಿಜಿ ಹುಡುಕಿ ಹೋಗುವ ತನಕ, ಒಂದು ವಾರದ ಮಟ್ಟಿಗೆ ಎಂಬ ನೆಪ ಹೇಳಿದರೂ ತಿಂಗಳಾದರೂ ಹೋಗುವ ಯೋಚನೆ ಇಲ್ಲ .. ಕಾರಣ ಸಂಪತ್ತೇ ..! ಮನೆಯವರನ್ನೆಲ್ಲಾ ದಿಕ್ಕರಿಸಿ ಅವಳನ್ನು ಮನೆಯಲ್ಲೇ ಉಳಿದುಕೊಳ್ಳುವಂತೆ ನೋಡಿಕೊಂಡ ..‌ಚಂದನಾ ಯಾರು ಏನೇ ಅಂದರೂ ಸಂಪತ್ ಮಾತು ಕೇಳಿಕೊಂಡು ಅಲ್ಲೇ ಉಳಿದಳು .. ಸಂಪತ್ – ಚಂದನಾ ಆತ್ಮೀಯತೆ ಮಿತಿ ಮೀರಿತು ಅಂತ ದೀಪಾ ಚಂದನಾಳ ಮೇಲೆ ಕೈ ಮಾಡಿದ್ದೂ ಆಯ್ತು, ಚಂದನಾಗೆ ಹೊಡೆದಿದ್ದಕ್ಕೆ ಸಂಪತ್ ದೀಪಾಗೆ ಹೊಡೆದಿದ್ದೂ ಆಯ್ತು .. ಗಲಾಟೆ ಜೋರಾಗಿ ಎಲ್ಲರೂ ಸಂಪತ್ ಮೇಲೆ ಸಿಟ್ಟಾದರು .. ದೀಪಾ ಅಪ್ಪ-ಅಮ್ಮನ ಎಂಟ್ರಿಯೂ ಆಯ್ತು .. ಎಲ್ಲರೂ ದುಃಖದಲ್ಲಿ .. ಕುಟುಂಬದ ನೆಮ್ಮದಿ ಹಾಳಾಯ್ತು .. ಕೊನೆಗೆ ಆ ಕಟು ಸತ್ಯ ರಿವೀಲ್ ಮಾಡಲೇ ಬೇಕಾದ ಪರಿಸ್ಥಿತಿ ಸಂಪತ್ ಗೆ ಎದುರಾಯ್ತು ..

Love Story : ಮದುವೆ ದಿನ ಹತ್ತಿರ ಬರ್ತಿದ್ದಂತೆ ಅದಿತಿಗೆ ಮನಸ್ಸು ಭಾರ….

ಚಂದನಾ ಹುಟ್ಟಿಗೆ ಕಾರಣ ಸಂಪತ್ ಅಪ್ಪ ..! :
ಸಂಪತ್ ಸಿಟ್ಟಲ್ಲೇ ಎಲ್ಲರೆದುರೇ ಸತ್ಯ ಸ್ಫೋಟಿಸಿಯೇ ಬಿಟ್ಟ .. !

ಚಂದನಾ ಸಂಪತ್ ಗೆ ತಂಗಿ ‌..
ಸಂಪತ್ ತಂದೆ, ದೀಪಾ ತಂದೆ ಒಂದೇ ಕಡೆ ಸ್ವಲ್ಪ ಟೈಮ್ ಕೆಲಸ ಮಾಡುತ್ತಿದ್ದರು .. ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಚಂದನಾ ತಾಯಿ ! ಸಂಪತ್ ತಂದೆ ಆಕೆಯೊಡನೆ ಸಲುಗೆಯಿಂದಿದ್ದರು .. ತನಗೆ ಮದುವೆ ಆಗಿದೆ ಎಂಬ ವಿಚಾರವನ್ನೂ ಮುಚ್ಚಿಟ್ಟು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು! ಆಕೆ ಗರ್ಭಧರಿಸುತ್ತಿದ್ದಂತೆ ತನಗೆ ಮದುವೆಯಾಗಿರುವ ವಿಚಾರ ಹೇಳಿ, ಅಬಾರ್ಷನ್ ಮಾಡಿಸುವಂತೆ ಒತ್ತಡ ಹೇರಿದ್ದರು .‌.‌ ಆದರೆ, ಚಂದನಾ ತಾಯಿ ತನ್ನ ತಪ್ಪಿಗೆ ಪ್ರಪಂಚವನ್ನೇ ಕಾಣದ ಕೂಸನ್ನು ಗರ್ಭದಲ್ಲೇ ಕೊಲ್ಲಲು ರೆಡಿಯಿರಲಿಲ್ಲ. ಜೊತೆಗೆ ಸಂಪತ್ ತಂದೆ ಪುರುಷೋತ್ತಮ್ ನ ಮೋಸಕ್ಕೆ ಅವರ ಹೆಂಡತಿ ಪುಟ್ಟ ಇಬ್ಬರು ಮಕ್ಕಳಿಗೆ ನೋವು ಕೊಡಲೂ ಕೂಡ ರೆಡಿ ಇರಲಿಲ್ಲ .. ಹಾಗಾಗಿ ರಿಯಲ್ ಜೀವನವನ್ನೇ ರಂಗಮಂದಿರ ಮಾಡಿಕೊಂಡು ನಟಿಸಿದ್ದರು ..
ದಿಢೀರ್ ಅಂತ ವಾರ ರಜೆ ಹೋಗಿ ಆಕೆ ಆಫೀಸ್ ಗೆ ಮರಳುವಾಗ ಕೊರಳಲ್ಲಿ ತಾಳಿ ಇತ್ತು ..! ಗಡಿಬಿಡಿಲಿ ಮಾವನ ಮಗನ ಜೊತೆ ಮದ್ವೆಯಾಯ್ತು, ಅವರು ಅಮೆರಿಕಾಕ್ಕೆ ಹೋದರು .. ನನ್ನನ್ನು ಮತ್ತೆ ಕರೆಸಿಕೊಳ್ತಾರೆ ಅಂತ ಕಥೆ ಕಟ್ಟಿ ಭಾರದ ಹೃದಯದಿಂದಲೇ ಸಿಹಿ ಹಂಚಿದಳು .. ತನ್ನ ಗರ್ಭದಲ್ಲಿರುವ ಮಗುವಿಗೆ ಕಳಂಕ ಬರಬಾರದು ಅಂತ ಮದುವೆಯಾಗದಿದ್ದರೂ ಪತಿ ಇರುವಂತೆಯೇ ನಡೆದುಕೊಂಡಳು ..! ಸಂಪತ್ ಅಪ್ಪ ಅವಳ ನೋವು ಕಂಡರೂ ಕಾಣದಂತೆ ಇದ್ದರು .. ಯಾರೂ ಇಲ್ಲದ ವೇಳೆ ಕ್ಷಮೆ ಕೇಳಿದರು .. ದುಡ್ಡು ಕೊಡಲು ಹೋದರು. ಸ್ವಾಭಿಮಾನಿ ಆ ತಾಯಿ 1 ರೂ ಹಣ ಕೂಡ ಮುಟ್ಟಲಿಲ್ಲ ..! ತನ್ನ ಗೆಳೆಯ ( ಸಂಪತ್ ತಂದೆ) ಇಂಥಾ ಮಹಾನುಭಾವ ಅಂತ ದೀಪಾಳ ತಂದೆಗೂ ಗೊತ್ತಾಗಲಿಲ್ಲ ..! ಒಂದು ದಿನ ಗಂಡ ಅಪಘಾತದಲ್ಲಿ ತೀರಿ ಹೋದರು ಅಂತ ಆ ತಾಯಿ ಕುಂಕುಮವನ್ನು ಅಳಿಸಿಕೊಂಡರು .. ಒನ್ಸ್ ಅಗೈನ್ ಎಲ್ಲಾ ಮಗಳಿಗಾಗಿ ..

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದೀಪಾ ಮತ್ತು ಚಂದನಾ ಒಂದೇ ಏಜಿನವರು ಒಟ್ಟೊಟ್ಟಿಗೆ ಓದಿದರು .. ದೀಪಾಳ ಮನೆಗೆ ಸಂಪತ್ ಕುಟುಂಬ ಹತ್ತಿರವಿತ್ತು. ಜೊತೆಗೆ ದೀಪಾ ಕುಟುಂಬ ಚಂದನಾ ಕುಟುಂಬಕ್ಕೂ ಮೊದಲಿನಂತೆಯೇ ಹತ್ತಿರವಿತ್ತು. ಆಕೆಯ ತಾಯಿಯ ಕಷ್ಟಕ್ಕೂ ನೆರವಾಗಿದ್ದಿದೆ. ಆದರೆ, ಸಂಪತ್ ತಂದೆ ಆ ಘಟನೆ ಬಳಿಕ ದೂರವಾದವರು ದೂರವೇ ಉಳಿದರು.. ಮೈಸೂರಿಂದ ಬೆಂಗಳೂರಿಗೆ ಶಿಫ್ಟ್ ಆದರು ..
ದೀಪಾಳ ಮನೆ ಗೃಹಪ್ರವೇಶಕ್ಕೆ ಹೋದಾಗ ಚಂದನಾಳ ಪರಿಚಯ ಸಂಪತ್ತಿಗಾಗಿತ್ತು .. ಅವಳು ಇಷ್ಟವಾಗಿದ್ದಳು .. ಅವನು ತನ್ನ ಮನೆಯಲ್ಲೂ ಹೇಳದೆ, ದೀಪಾ ಮನೆಯಲ್ಲೂ ಹೇಳದೆ ನೇರವಾಗಿ ಚಂದನಾಳ ಒಪ್ಪಿಗೆ ಪಡೆದು ಅವರ ತಾಯಿ ಬಳಿ ಹೋಗಿ ಮದುವೆ ಪ್ರಸ್ತಾಪ ಮುಂದಿಟ್ಟಿದ್ದ ! ನಿಮ್ಮ ಮಗಳ ಸ್ನೇಹಿತೆ ದೀಪಾಳ ತಂದೆಯ ಸ್ನೇಹಿತ ಪುರುಷೋತ್ತಮ್ ಅವರ ಮಗ ನಾನು ಅಂತ ಪರಿಚಯಿಸಿಕೊಂಡಾಗ ಚಂದನಾಳ ತಾಯಿಗೆ ಶಾಕ್ ಮತ್ತು ಹೃದಯ ಚೂರಾದ ಅನುಭವ .. ಚಂದನಾ ಕೂಡ ಸಂಪತ್ ನನ್ನು ಮೆಚ್ಚಿದ ವಿಷಯ ತಿಳಿದಾಗ ಅನಿವಾರ್ಯವಾಗಿ ಅವರಿಬ್ಬರ ಹಠದಿಂದಾಗಿ ಕರಾಳ ಸತ್ಯವನ್ನು ಹೇಳಿದರು. ಚಂದನಾ ನಿಂಗೆ ಸಂಬಂಧದಲ್ಲಿ ತಂಗಿಯಾಗಬೇಕಪ್ಪಾ? ನಿನ್ನ ತಂದೆಯೇ ಇವಳ ಹುಟ್ಟಿಗೆ ಕಾರಣ ಎಂದು ಹೇಳಿದಾಗ ಸಂಪತ್ – ಚಂದನಾ ಹೃದಯ ಪುಡಿ‌ಪುಡಿ !
ಬಳಿಕ ಅಪ್ಪ-ಅಮ್ಮ, ಅಣ್ಣ-ಅತ್ತಿಗೆ ಎಲ್ಲರೂ ಹೇಳಿದಂತೆ ದೀಪಾಳ ಮದುವೆಯಾದ .. ಚಂದನಾ ವಿಷಯ ಎಲ್ಲೂ ಬಿಟ್ಟು ಕೊಡಲಿಲ್ಲ.

kannada love quotes | kannada love status

ಆಮೇಲೆ ಚಂದನಾ ತಂಗಿ ಸ್ಥಾನ ತುಂಬಿದಳು .. ಸಂಪತ್ ಕೂಡ ಅಣ್ಣನಾಗಿ ಅವಳ ಬೆನ್ನಿಗೆ ನಿಂತ .. ಅದು ಕೂಡ ಯಾರಿಗೂ ಗೊತ್ತಾಗದಂತೆ ..ಚಂದನಾ ತಾಯಿಗೆ ಕ್ಯಾನ್ಸರ್ ಚಿಕಿತ್ಸೆಗೆ ಒಂದಿಷ್ಟು ಹಣ ನೀಡಿದ, ಉಳಿಸಿಕೊಳ್ಳಲು ಪ್ರಯತ್ನಿಸಿದ ಅವರು ಬದುಕುಳಿಯಲಿಲ್ಲ .. ಚಂದನಾಳನ್ನು ತನ್ನ ದುಡ್ಡಲ್ಲೇ ಎಂಬಿಎ ಓದಿಸಿದ ..

ಕನ್ನಡ ವಾಟ್ಸ್ ಆಪ್ ಸ್ಟೇಟಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಆಮೇಲೆ ಇಂಟರ್ನ್ ಶಿಪ್ ಟೈಮಲ್ಲಿ ಅವಳು ದೀಪಾಳ ಮುಖಾಂತರವೇ ಮನೆ ಸೇರುವಂತೆ ನೋಡಿಕೊಂಡ.. ಅವಳನ್ನು ಒಂಟಿಯಾಗಿ ಯಾರೋ ಮೂರನೇ ಅವಳಂತೆ ನೋಡಲು ಮನಸ್ಸು ಒಪ್ಪದೆ , ಆತ್ಮೀಯವಾಗಿ ನಡೆದುಕೊಂಡ .. ಅವಳ ಹಿಂದಿನ ಶಕ್ತಿಯಾದ .. ಒಂದು ದಿನ ಎಲ್ಲವನ್ನೂ ಹೇಳಬೇಕಿಂದಿದ್ದ, ಸಾಧ್ಯವಾಗಿರಲಿಲ್ಲ‌.. ಸಲುಗೆ ಜಾಸ್ತಿ ಅಂತ ಕುಟುಂದ ವಿರೋಧ ಕಟ್ಟಿಕೊಂಡ ಮೇಲೆ , ಚಂದನಾಳ ಮನಸ್ಸು ಮತ್ತು ತನ್ನ ಕುಟುಂಬ, ಪತ್ನಿ ಹಾಗೂ ಆಕೆಯ ಕುಟುಂಬಕ್ಕೆ ಸತ್ಯ ಗೊತ್ತಾಗಲಿ ಅಂತ ಎಲ್ಲವನ್ನೂ ಹೇಳಿದ. ತಂದೆ ಅವಮಾನದಿಂದ ತಲೆತಗ್ಗಿಸಿದರು. ತನ್ನ ತಪ್ಪಿಗೆ ಬಿಕ್ಕಿ ಬಿಕ್ಕಿ ಅತ್ತರು .. ಸ್ವಲ್ಪ ದಿನ ಎಲ್ಲರ ಮನಸ್ಸು ಒಡೆದಿತ್ತು, ನಿಧಾನಕ್ಕೆ ಸರಿಯಾಗುತ್ತಿದೆ… ಸಂಪತ್ ತಂದೆ ತನ್ನ ತಪ್ಪಿಗೆ ಚಂದನಾಳನ್ನು ಮಗಳೆಂದು ಒಪ್ಪಿಕೊಂಡಿದ್ದಾರೆ. ಸಂಪತ್ ತಾಯಿ ಸರೋಜ ಕೂಡ ಗಂಡನ ತಪ್ಪಿಗೆ ಚಂದನಾಗೆ ಏಕೆ ನೋವು ಕೊಡಬೇಕು ಅಂತ ಅವಳನ್ನು ಸ್ವಂತ ಮಗಳಂತೆ ಟ್ರೀಟ್ ಮಾಡ್ತಿದ್ದಾರೆ, ದೀಪಾ ಗಂಡನ ಮಾನವೀಯತೆಗೆ ಸಲಾಂ ಅಂದಿದ್ದಾಳೆ .. ಸಂಪತ್ ಅಣ್ಣ ಅತ್ತಿಗೆ ಕೂಡ ಚಂದನಾಳನ್ನು ಮನೆಮಗಳೆಂದು ಒಪ್ಪಿಕೊಂಡಿದ್ದಾರೆ.

Kannada Kavanagalu | Preetiya Kavana – #06

Kannada Kavanagalu | Preetiya Kavana – #02

Kannada Kavanagalu | Preetiya Kavana – #01

Kannada Nudimuttugalu – Ver.03

Nimagu Ee Blog Nalli Post Maadabekemba Aasey iddare

Love stories, Nimma Kavana, Nudimuttugalanna

email maadi – [email protected]

ಶೇರ್ ಮಾಡಿ Share this with your friends on WhatsApp

Similar Articles

5 thoughts on “ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

  1. Very good article! We are linking to this particularly great content on our site. Keep up the great writing.

Leave a Reply

Top