ವೋಟ್ ಮಾಡಲೊಂದು ಆ್ಯಪ್ !?

ಇದು ಡಿಜಿಟಲ್ ಯುಗ, ಆ್ಯಪ್‍ಗಳ ಯುಗ, ಮೂರು ವರ್ಷದ ಮಗುವಿನಿಂದ ಹಿಡಿದು ಅರವತ್ತು ವರ್ಷದ ಹಿರಿಯರವರೆಗೂ ಮೊಬೈಲ್ ಮತ್ತು ಅದರಲ್ಲಿನ ಆ್ಯಪ್‍ಗಳಬಗ್ಗೆ ತಿಳಿಯದವರು ಬಹಳ ಕಡಿಮೆಯೇ. ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳೂ ಮೊಬೈಲನ್ನು ಲೀಲಾಜಾಲವಾಗಿ ಆಪರೇಟ್ ಮಾಡುತ್ತಿದ್ದಾರೆ. ಇನ್ನು ಹಿರಿಯರೂ ಹಿಂದೆ ಬಿದ್ದಿಲ್ಲ, ಕಾಲಕ್ಕೆ ತಕ್ಕಂತೆ ಅಪ್‍ಡೇಟ್ ಆಗುತ್ತಿದ್ದಾರೆ. ಮೊಬೈಲ್‍ನಲ್ಲಿ ಪ್ರತಿಯೊಂದಕ್ಕೂ ಆ್ಯಪ್‍ಗಳು ಹುಟ್ಟಿಕೊಂಡಿವೆ, ನಾವು ಹಾಕುವ ಹೆಜ್ಜೆಯನ್ನು ಎಣಿಸುವ ಆ್ಯಪ್‍ನಿಂದ ಹಿಡಿದು, ನಾವು ಸೇವಿಸುವ ಆಹಾರಗಳ ಬಗ್ಗೆ, ಉಡುವ ಉಡುಗೆ ತೊಡುಗೆಯಬಗ್ಗೆ, ಮನರಂಜನೆ, ಮಾಹಿತಿ-ತಂತ್ರಜ್ಞಾನ ಹೀಗೇ ಹತ್ತು ಹಲವು ಆ್ಯಪ್‍ಗಳು ಜನ್ಮ ತಾಳಿವೆ. ಅದೇ ರೀತಿ ಚುನಾವಣೆಯ ಸಮಯದಲ್ಲಿ ವೋಟಿಂಗ್ ಮಾಡಲು ಒಂದು ಆ್ಯಪ್ ಬಂದರೆ ಹೇಗೆ ? ಆ ಕಾಲವೂ ದೂರವಿರಲಾರದು, ಮುಂದಿನ ದಿನಗಳಲ್ಲಿ ವೋಟ್ ಮಾಡಲು ಆ್ಯಪ್ ಬಂದರೂ ಅಚ್ಚರಿಯಿಲ್ಲ, ಇಂತಹ ಒಂದು ಆಲೋಚನೆಯೇ ಸೂಪರ್ ಅಲ್ಲವೇ ?

Love Story : ನವಿಲೂರಿನ ಗದ್ದೆಯ ಅಂಚಿನಲ್ಲಿ ಪ್ರತಿದಿನವೂ ಬೆಳದಿಂಗಳ ಹಾಲ್ಗೆನೆಯ ಸುಂದರಿ ರಮ್ಯಾ

ಐಡಿಯಾ ಹುಟ್ಟಿದ್ದು :- ಇತ್ತೀಚೆಗೆ ಕೆಪಿಎಸ್‍ಸಿ ಕರೆ ನೀಡಿದ್ದ ಎಸ್‍ಡಿಸಿ, ಎಫ್‍ಡಿಸಿ ಆನ್‍ಲೈನ್ ಅಪ್ಲಿಕೇಷನ್ ತುಂಬುವಾಗ ಹೀಗೊಂದು ಆಲೋಚನೆಯು ನನ್ನನ್ನು ಬಹುವಾಗಿ ಕಾಡಿತು. ಕೆಪಿಎಸ್‍ಸಿ ವೆಬ್‍ಸೈಟ್‍ನಲ್ಲಿ ಒಂದುಬಾರಿ ನಾವು ಅಕೌಂಟ್ ಓಪನ್ ಮಾಡಿದರೆ ಸಾಕು, ಮುಂಬರುವ ಕೆಪಿಎಸ್‍ಸಿ ಕರೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸುಲಭವಾಗಿ ಅಪ್ಲಿಕೇಷನ್‍ಗಳನ್ನು ಹಾಕಬಹುದಾಗಿದೆ. ಒಮ್ಮೆ ಅಕೌಂಟ್ ಕ್ರಿಯೇಟ್ ಮಾಡಿ ಅದರಲ್ಲಿ ನಮ್ಮ ಮಾಹಿತಿ ಹಾಗೂ ವಿದ್ಯಾಭ್ಯಾಸದ ಡೀಟೇಲ್‍ಗಳನ್ನ ಹಾಗೂ ಅಂಕಪಟ್ಟಿ ಮತ್ತು ಇತರೆ ದಾಖಲೆಗಳನ್ನು ಅಪ್‍ಲೋಡ್ ಮಾಡಬೇಕು, ನಂತರ ಕೆಪಿಎಸ್‍ಸಿ ಕರೆಯುವ ಆನ್‍ಲೈನ್ ಅಪ್ಲಿಕೇಷನ್‍ಗಳಿಗೆ ಸುಲಭವಾಗಿ ಅರ್ಜಿಗಳನ್ನು ಹಾಕಬಹುದು. ಇದೇ ಮಾದರಿಯಲ್ಲಿ ವೋಟಿಂಗ್ ಆ್ಯಪ್ ಅಭಿವೃದ್ಧಿ ಪಡಿಸಬಹುದಲ್ಲವೇ ಎಂಬ ಆಲೋಚನೆಯು ನನ್ನ ತಲೆಗೆ ಬಂದಿದ್ದು.

ಕನ್ನಡ ಕವನಗಳು, ಕನ್ನಡ ನುಡಿಮುತ್ತುಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಹಿಂದೆ ನಡೆದ ಚುನಾವಣೆಯಲ್ಲಿ ಬೆಂಗಳೂರಿಗರು ಚಲಾಯಿಸಿದ ಸರಾಸರಿ ಮತದಾನವನ್ನು ನೋಡಿದ ಮೇಲೆ ಬಹಳ ಬೇಸರವಾಯಿತು. ಸಿಲಿಕಾನ್ ಸಿಟಿ ರಾಜ್ಯದ ರಾಜಧಾನಿಯಾಗಿದ್ದು, ಪ್ರಜ್ಞಾವಂತ ಪ್ರಜೆಗಳನ್ನು ಹೊಂದಿದ್ದರೂ ಅಷ್ಟು ಕಡಿಮೆ ಸಂಖ್ಯೆಯಲ್ಲಿ ಮತದಾನ ಮಾಡಿದ್ದು ಬಹಳ ನಾಚಿಕೆಗೇಡಿನ ಸಂಗತಿ. ಅದೇ ರೀತಿ ಇಂದಿನ ಪರಿಸ್ಥಿತಿಯು ಬಹಳ ಭೀಕರವಾಗಿದ್ದು ಚುನಾವಣೆ ಬಂದಲ್ಲಿ ಮತದಾನ ಮಾಡುವುದಿರಲಿ, ಮನೆಯಿಂದ ಹೊರಗೆ ಬಾರದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಈಗಿನ ಜಗತ್ತು `ಎಸ್‍ಎಂಎಸ್’ ತತ್ವದ ಮೇಲೆ ನಿಂತಿದೆ, ಅಂದರೆ ಸ್ಯಾನಿಟೈಸರ್, ಮಾಸ್ಕ್, ಸೋಷಿಯಲ್ ಡಿಸ್ಟೆನ್ಸ್…
ಇಂತಹ ಪರಿಸ್ಥಿತಿಗಳನ್ನು ವೋಟಿಂಗ್ ಆ್ಯಪ್‍ನಿಂದ ಕಡಿಮೆ ಮಾಡಬಹುದಲ್ಲಾ ಎಂಬ ಸಣ್ಣ ಆಲೋಚನೆ ಬಂದಿದ್ದೇ, ವೋಟಿಂಗ್ ಆ್ಯಪ್‍ನ ಕಲ್ಪನೆಯನ್ನು ಜಾಗೃತಗೊಳಿಸಿತು.

ಅವನ ಲೈಫ್ ಬಿಂದಾಸ್ ಆಗಿರುವಾಗಲೇ ಎಂಟ್ರಿಕೊಟ್ಟವಳು ಪತ್ನಿ ದೀಪಾಳ ಗೆಳತಿ ಚಂದನಾ….

ವೋಟಿಂಗ್ ಆ್ಯಪ್‍ನ ಕಾರ್ಯವೈಖರಿ ಹೀಗಿರಬೇಕು :- ಮೇಲೆ ಹೇಳಿದಂತೆ ಕೆಪಿಎಸ್‍ಸಿ ವೆಬ್‍ಸೈಟ್‍ನ ಹಾಗೆ ವೋಟಿಂಗ್ ಆ್ಯಪ್‍ನಲ್ಲಿ ಜನರು ಚುನಾವಣಾ ಆಯೋಗವು ನೀಡಿರುವ ವೋಟರ್ ಐಡಿ ನಂಬರ್ ಹಾಗೂ ವೋಟರ್ ಐಡಿ ಅಥವಾ ತಮ್ಮ ಆಧಾರ್ ಕಾರ್ಡ್ ಮುಖಾಂತರ ನೋಂದಾಯಿಸಿಕೊಳ್ಳಬೇಕು ಅಥವಾ ವೋಟಿಂಗ್ ಆ್ಯಪನ್ನು ಈಗಾಗಲೇ ಚುನಾವಣಾ ಆಯೋಗದ ವೆಬ್‍ಸೈಟ್‍ಗೆ ಡೈರೆಕ್ಟ್ ಲಿಂಕ್ ಮಾಡಬಹುದು. ಮತದಾನದ ಸಂದರ್ಭದಲ್ಲಿ ಮತದಾರನು ವೋಟಿಂಗ್ ಆ್ಯಪ್‍ಗೆ ಲಾಗಿನ್ ಆಗಿ ತಮ್ಮ ನೆಚ್ಚಿನ ಅಭ್ಯರ್ಥಿಗೆ ವೋಟ್ ಮಾಡಬಹುದು. ಒಂದು ಬಾರಿ ಆ್ಯಪ್ ಮುಖಾಂತರ ಮತಚಲಾಯಿಸಿದ ನಂತರ ಮತ್ತೆ ಮತ ಚಲಾಯಿಸಲು ಬಾರದಂತೆ ಅಥವಾ ಸಾಧ್ಯವಾಗದಂತೆ ವೋಟಿಂಗ್ ಆ್ಯಪ್ ಸಾಫ್ಟ್‍ವೇರ್ ಡಿಸೈನ್ ಮಾಡಿರಬೇಕು. ಇನ್ನು ವೋಟಿಂಗ್ ಆ್ಯಪ್‍ನ ಭದ್ರತೆಯ ದೃಷ್ಟಿಯಿಂದ ಬ್ಯಾಂಕಿಂಗ್ ಆ್ಯಪ್ ಹಾಗೂ ಇತರೆ ಆ್ಯಪ್‍ಗಳಲ್ಲಿ ಬಳಸುವಂತೆ ಓಟಿಪಿ (ಒನ್ ಟೈಮ್ ಪಾಸ್‍ವರ್ಡ್) ವ್ಯವಸ್ಥೆಯನ್ನು ಜಾರಿಗೆ ತಂದರೆ ಇನ್ನೂ ಅತ್ಯುತ್ತಮ, ಇದರಿಂದ ವೋಟಿಂಗ್ ಆ್ಯಪ್‍ನ ದಕ್ಷತೆಯೂ ಹೆಚ್ಚುತ್ತದೆ ಹಾಗೂ ಆ್ಯಪ್ ದುರುಪಯೋಗವಾಗದಂತೆ ತಡೆಯಲೂಬಹುದು. ಮತದಾರನು ವೋಟರ್ ಐಡಿ ಅಥವಾ ಆಧಾರ್ ಮುಖಾಂತರ ಆ್ಯಪ್‍ಗೆ ಲಾಗಿನ್ ಆಗಿ ತನ್ನ ನೊಂದಾಯಿತ ಮೊಬೈಲ್ ನಂಬರ್ ಮೂಲಕ ಓಟಿಪಿ ಪಡೆದು ಮತ ಚಲಾಯಿಸಲು ಸಾಧ್ಯವಾಗುವ ರೀತಿಯಲ್ಲಿ ಆ್ಯಪ್ ಡಿಸೈನ್ ಮಾಡಿದರೆ ಉತ್ತಮವಾಗಿರುತ್ತದೆ. ವೋಟಿಂಗ್ ಆ್ಯಪ್‍ನಿಂದ ಮತದಾನದ ಸಂಖ್ಯೆಯೂ ಹೆಚ್ಚುತ್ತದೆ ಹಾಗೂ ವೋಟಿಂಗ್ ಪ್ರಮಾಣ ಹೆಚ್ಚುತ್ತದೆ. ಮತದಾರನು ತಾನಿರುವ ಸ್ಥಳದಿಂದಲೇ ಅಥವಾ ದೇಶ ವಿದೇಶಗಳಿಂದ ತಾನು ಇದ್ದಲ್ಲಿಂದಲೇ ಮತ ಚಲಾಯಿಸಬಹುದು. ಪ್ರತಿಯೊಂದು ಮತವೂ ಅಮೂಲ್ಯ, ದೇಶದ ಭವಿಷ್ಯವನ್ನು ರೂಪಿಸುವಲ್ಲಿ ನಿರ್ಣಾಯಕ.

ಕನ್ನಡ ವಾಟ್ಸ್ ಆಪ್ ಸ್ಟೇಟಸ್ ಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇದೊಂದು ನನ್ನ ಸಣ್ಣ ಪರಿಕಲ್ಪನೆಯಷ್ಟೇ, ಇದು ಡಿಜಿಟಲ್ ಯುಗ, ಆ್ಯಪ್‍ಗಳ ಯುಗ, ಮುಂದೊಂದು ದಿನ ಈ ನನ್ನ ಸಣ್ಣ ಪರಿಕಲ್ಪನೆಯು ನಿಜವಾಗಬಹುದು, ಅಥವಾ ಅಮೇರಿಕಾ ಮುಂತಾದ ದೇಶಗಳಲ್ಲಿದ್ದಂತೆ ಆನ್‍ಲೈನ್ ಮತದಾನದ ವ್ಯವಸ್ಥೆ ಜಾರಿಗೆ ತಂದು ಮತದಾನದ ಪ್ರಮಾಣ ಹೆಚ್ಚಿಸಬಹುದು. ಹಾಗೆಯೇ ಸರ್ಕಾರದ ಸವಲತ್ತುಗಳನ್ನು ಬಳಸಲು (ಉದಾ: ವಿದ್ಯುತ್, ನೀರು, ಆಹಾರ, ಆರೋಗ್ಯ, ಸಾರಿಗೆ, ಶಿಕ್ಷಣ ಮುಂತಾದವುಗಳಿಗೆ) ಮತದಾನ ಕಡ್ಡಾಯಗೊಳಿಸಬೇಕು.

  • ರಾಘವಆರ್ಯ

ಕನ್ನಡ ಲವ್ ಸ್ಟೋರಿಗಳನ್ನು ಓದಲು kannadatv.in ಗೆ ಭೇಟಿ ನೀಡಿ

ನೀವೂ ಪ್ರೇಮಕಥೆಗಳು, ಕವನ, ನುಡಿಮುತ್ತುಗಳು ಬರೆಯುತ್ತೀರ

ನಿಮ್ಮ ಬರಹಗಳನ್ನು ಈ ನಂಬರ್ ಗೆ 82963 01915 ವಾಟ್ಸ್ ಆಪ್ ಮಾಡಿ

Follow us on Telegram App

ನಾವು ಯಾವಾಗಲೂ ಹಿಂದೆ ನೋಡುತ್ತಲೆ ಇದ್ದರೆ…..

Kannada Kavanagalu | Preetiya Kavana – #05

Similar Articles

Top
error: Content is protected !!